ಒಟ್ಟಿಗೆ ಎಸ್ಎಸ್ಎಲ್ ಸಿ ಪಾಸ್ ಮಾಡಿದ ಅಮ್ಮ, ಮಗಳು

ಅಮ್ಮ, ಮಗಳು ಒಟ್ಟಿಗೆ ಎಸ್ಎಸ್ಎಲ್ ಸಿ ಪಾಸ್

ಮಗಳ ಜೋಡಿ ಅಮ್ಮ ಬರೆದಳು ಎಕ್ಸಾಂ

ಫೇಮಸ್ ಆದ್ರು ಮಂಗಳೂರಿನ ಈ ಜೋಡಿ

ವಯಸ್ಸಿನ ಹಂಗು ತೊರೆದು ಪಾಸ್ ಆದ್ರು ಆಯಾ
ಎಸ್ಎಸ್ಎಲ್‌ಸಿ‌ ಪರೀಕ್ಷೆಯಲ್ಲಿ  ಬರೋಬ್ಬರಿ 145 ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದಿದ್ದಾರೆ. ಶಿಕ್ಷಣದ ಗುಣಮಟ್ಟ, ಕಲಿಕಾ ಪ್ರಕ್ರಿಯೆಯ ಗುಣಮಟ್ಟ, ಮೌಲ್ಯಮಾಪನದ ಗುಣಮಟ್ಟದ ಬಗ್ಗೆ ಅಲ್ಲಲ್ಲಿ ಚರ್ಚೆ, ವಾದಗಳು ಕೇಳಿಬಂದರೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಲ್ಲೆಡೆಯಿಂದಲೂ ಪ್ರಶಂಸೆ ಹರಿದು ಬಂದಿದೆ. ಹೊಸ ವಿದ್ಯಾರ್ಥಿಗಳಲ್ಲದೇ ಹಲವು ಹಿರಿಯರೂ  ವಿದ್ಯೆ ಪಡೆದುಕೊಳ್ಳಲು, ಅರಿವು ಗಳಿಸಿಕೊಳ್ಳಲು ವಯಸ್ಸಿನ ಹಂಗಿಲ್ಲ ಎನ್ನುವಂತೆ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅವರಲ್ಲೊಬ್ಬರು ಮಂಗಳೂರಿನ‌ ಮಮತಾ.

ಮಂಗಳೂರು ಸಮೀಪದ ಕುತ್ತಾರಿನ‌ ಉಚ್ಚಿಲದಲ್ಲಿ ಅಂಗನವಾಡಿ ಸಹಾಯಕರಾಗಿರುವ ಮಮತಾ  ಹೀಗೆ ಪಾಸಾಗಿ ಪರೀಕ್ಷೆ ಬರೆಯಬಯಸುವ ಹಿರಿಯರಿಗೆ ಸ್ಪೂರ್ತಿ ತುಂಬಿದ್ದಾರೆ. ಅಂಗನವಾಡಿ ಟೀಚರ್ ಆಗಲು ಇರಬೇಕಾದ ಕನಿಷ್ಠ ಅರ್ಹತೆ ಎಸ್ಎಸ್ಎಲ್‌ಸಿ ಪರೀಕ್ಷೆ ತೇರ್ಗಡೆಯಾಗೋದು. ಈಗ ಈ ಗುರಿಯನ್ನು ಸಾಧಿಸಿದ ಖುಶಿಯಲ್ಲಿದ್ದಾರೆ ಮಮತಾ.

ಜೈ ಹನುಮಾನ್ ಮಹಿಳಾ ಕ್ರೀಡಾ ಸಂಘಟನೆಯ ಸದಸ್ಯರೂ ಆಗಿರುವ ಇವರು ಇಪ್ಪತ್ತೊಂದು ವರ್ಷಗಳ ಹಿಂದೆ ವಿದ್ಯಾಭ್ಯಾಸ ನಿಲ್ಲಿಸಿದ್ದರು. “ಕೆಲವು ವರ್ಷಗಳ ನಂತರ, ನನಗೆ ಶಿಕ್ಷಣದ ಪ್ರಾಮುಖ್ಯತೆ ಅರಿವಾಯಿತು. ಅರಿತುಕೊಂಡೆ, ಮತ್ತು ನಾನು ಕನಿಷ್ಟ SSLC ಪರೀಕ್ಷೆಯಲ್ಲಾದರೂ ತೇರ್ಗಡೆಯಾಗಬೇಕು ಅಂದುಕೊಂಡೆ.  ಇದರಿಂದಾಗಿ ನಾನು ಅಂಗನವಾಡಿ ಶಿಕ್ಷಕರಾಗಿ ಬಡ್ತಿ ಪಡೆಯಬಹುದಿತ್ತು” ಎನ್ನುತ್ತಾರೆ ಮಮತಾ. 2018ರಲ್ಲಿ ಪರೀಕ್ಷೆ ಬರೆದು ನಾಪಾಸಾಗಿದ್ದ ಇವರು ಈಗ 283 ಅಂಕಗಳೊಂದಿಗೆ ಪಾಸಾಗಿದ್ದಾರೆ.

ಬಬ್ಬುಕಟ್ಟೆಯಲ್ಲಿನ ಹಿರಾ ಮಹಿಳಾ ಕಾಲೇಜಿನ ಉಪ ಪ್ರಾಂಶುಪಾರಾದ ಭಾಗೀರತಿ ಅವರ ಸಂಪರ್ಕಕ್ಕೆ ಬಂದ ನಂತರ ಮಮತಾ ತನ್ನ ಶಿಕ್ಷಣವನ್ನು ಮುಂದುವರೆಸಲು ನಿರ್ಧರಿಸಿದರು. “ಭಾಗೀರತಿ ಅವರು ಪರೀಕ್ಷೆಗಾಗಿ ತಯಾರಾಗಲು ನನಗೆ ಸಹಾಯ ಮಾಡಿದರು ಮತ್ತು ಪರೀಕ್ಷೆಗೆ ಕೊನೆಗೊಳ್ಳುವ ತನಕ ನಾನು ಅವರ ಮನೆಯಲ್ಲೇ ಇದ್ದೆ. ನಾನು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿ ಪರೀಕ್ಷೆಯನ್ನು ಬರೆದು ಪಾಸಾಗಿದ್ದೇನೆ” ಎಂದು ಅವರು ಹೇಳುತ್ತಾರೆ..

ಮತ್ತೊಂದು ವಿಶೇಷವೆಂದರೆ ಮಮತಾ ಅವರ ಮಗಳು ಖುಶಿ ಸಹ ಈ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿನಿ. ಅವರು 591 ಅಂಕಗಳೊಂದಿಗೆ ಪರೀಕ್ಷೆ ಪಾಸ್ ಮಾಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಂತೆ ಸಂಭ್ರಮಾಚರಣೆ ನಡೆಯಿತು.  “ಗಣಿತ ನನ್ನ ನೆಚ್ಚಿನ ವಿಷಯವಾಗಿತ್ತು ಮತ್ತು ನನಗೆ ಇಂಗ್ಲಿಷ್ ಕಠಿಣವಾಗಿತ್ತು. ಮನೆಯಲ್ಲಿ ನಾನು ಮತ್ತು ನನ್ನ ಮಗಳು ಇಬ್ಬರೂ ಒಟ್ಟಿಗೆ ಓದಿದ್ದೇವೆ. ನನ್ನ ಮಗಳು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದರೆ ನಾನು ಕನ್ನಡ ಭಾಷೆಯಲ್ಲಿ ಬರೆದಿದ್ದೇನೆ. ನನ್ನ ಕುಟುಂಬ ಸದಸ್ಯರು ನನಗೆ  ನೀಡಿದ ಬೆಂಬಲ ಅಪಾರ” ಎನ್ನುವ ಮಮತಾ .

“ನನ್ನ ಸುತ್ತಲಿನ ಜನರು ವಿದ್ಯಾವಂತರಾಗಬೇಕೆಂದು ನಾನು ಬಯಸುತ್ತೇನೆ.  ಆದ್ದರಿಂದ, ಜೈ ಹನುಮಾನ್ ಕ್ರೀಡಾ ಮಂಡಳಿಯ ಕೆಲವು ಸದಸ್ಯರು ಮಕ್ಕಳಿಗೆ ಉಚಿತ ಟ್ಯೂಷನ್ ನೀಡುವಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು  ಹೇಳುತ್ತಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post