ಶಾಲಾ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯಕ್ಕೆ ಬೇಡಿಕೆ
ಜಯಕರ್ನಾಟಕ
ಸಂಘಟನೆಯಿಂದ ತಹಶೀಲ್ದಾರ್‌ಗೆ ಮನವಿ
ನಿತ್ಯ
ಸಂಚಾರಕ್ಕೆ ಅಡ್ಡಿ…
ವಿದ್ಯಾರ್ಥಿಗಳಿಗೆ ನಡೆಗೆ ಬಿಟ್ಟರೆ ಬೇರಿಲ್ಲ ಮಾರ್ಗ
ತೀರ್ಥಹಳ್ಳಿ
ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕುರುವಳ್ಳಿ ನಾಗರಾಜ್ ನೇತೃತ್ವದಲ್ಲಿ ತಹಶೀಲ್ದಾರ್
ಡಾ.ಎಸ್.ಬಿ. ಶ್ರೀಪಾದ ಅವರಿಗೆ ಮನವಿ ಸಲ್ಲಿಸಲಾಗಿದೆ.
ಮೇಳಿಗೆ,
ಕಟ್ಟೇಹಕ್ಕಲು, ಹೆದ್ದೂರು, ಮೃಗಾವಧೆ, ಹುಣಸವಳ್ಳಿ, ಹರಳೀಮಠ, ಕೊಂಡ್ಲೂರು, ಟೆಂಕಬೈಲು,
ಕನ್ನಂಗಿ, ಗರಗ, ನಗರ ಮಾರ್ಗ, ಮಳಲೀಮಕ್ಕಿ, ಬುಕ್ಕಿವರೆ, ದೇಮ್ಲಾಪುರ, ಕೆಂದಾಳಬೈಲು, ಗುಡೇಕೇರಿ,
ಯಡೂರು, ಮಾಸ್ತಿಕಟ್ಟೆ, ತೀರ್ಥಮುತ್ತೂರು ಸೇರಿದಂತೆ ಬಹುತೇಕ ಭಾಗದ ವಿದ್ಯಾರ್ಥಿಗಳು ಪರದಾಡಬೇಕು.
ಹಿಂದೆ ಇದ್ದ ಸಹಕಾರಿ ಸಾರಿಗೆ ಬಸ್ ಸಂಚಾರ ನಿಲ್ಲಿಸಿದ್ದರ ಪರಿಣಾಮ ಆ ಮಾರ್ಗದಲ್ಲಿ ಇನ್ನೂ ಕೂಡ ಬಸ್
ಸಂಚಾರ ಮೊದಲಿನಂತೆ ಆರಂಭವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಗ್ರಾಮೀಣ ಜನತೆ ಸಂಕಷ್ಟಕ್ಕೆ
ತಲುಪಿದ್ದಾರೆ. ತಕ್ಷಣ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕುರುವಳ್ಳಿ ನಾಗರಾಜ್ ಮನವಿ
ಮಾಡಿಕೊಂಡಿದ್ದಾರೆ.
