ತಹಶೀಲ್ದಾರ್ ಶ್ರೀಪಾದ್ ವರ್ಗಾವಣೆ
ಬೆಂಗಳೂರು ಅಪರ ಆಯುಕ್ತರಾಗಿ ವರ್ಗಾವಣೆ
ಕಂದಾಯ ಇಲಾಖೆಗೆ ಅನೇಕ ಪ್ರಸ್ತಾವನೆ ಸಲ್ಲಿಸಿದ್ದ ತಹಶೀಲ್ದಾರ್
ನಿಷ್ಕಳಂಕ ವ್ಯಕ್ತಿತ್ವದ, ಸಾಹಿತ್ಯ ಪ್ರೇಮಿ, ಸಮಾಜದ ಎಲ್ಲಾ ವಿಭಾಗದಲ್ಲಿಯೂ ಪಾಂಡಿತ್ಯ ಪಡೆದಿದ್ದ, ಸಜ್ಜನ, ಅಗಾದ ಪಾಂಡಿತ್ಯ ಹೊಂದಿದ ತೀರ್ಥಹಳ್ಳಿ ತಹಶೀಲ್ದಾರ್ ಡಾ.ಎಸ್.ಬಿ ಶ್ರೀಪಾದ್ ಪದೋನ್ನತಿ ಹೊಂದಿ ಬೆಂಗಳೂರು ಅಪರ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ.
ಇವರ ಕಾಲಘಟದಲ್ಲಿ ಕಂದಾಯ ಇಲಾಖೆಯ ಅನೇಕ ಜಟಿಲ ಕಾನೂನುಗಳ ತೊಡಕು ನಿವಾರಣೆ ಸೇರಿದಂತೆ, ಸಾರ್ವಜನಿಕರ ಕೆಲಸಕ್ಕೆ ಬೇಕಾದ ಅನೇಕ ಕಾನೂನು ರೂಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಕರೋನಾ ಅವಧಿಯಲ್ಲಿ ಒಳ್ಳೆಯ ಸೇವೆ ನೀಡಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಸಿಬ್ಬಂದಿ, ಜನತೆಗೆ ಅವರನ್ನು ಪ್ರೀತಿಯಿಂದ ಬೀಳ್ಕೊಡುಗೆ ಮಾಡಲಿದ್ದಾರೆ.