ಮೇ 28ರಂದು ಬಿಡುಗಡೆ: ಗರ್ಕು ಕಾದಂಬರಿ ಬಿಡುಗಡೆಗೆ ಸಜ್ಜು

ಗರ್ಕು ಕಾದಂಬರಿ ಬಿಡುಗಡೆಗೆ ಸಜ್ಜು
ಶಿವಾನಂದ ಕರ್ಕಿ ಎರಡನೇ ಪುಸ್ತಕ
ಮೇ 28ರಂದು ಬಿಡುಗಡೆ
ಅಕೇಶೀಯಾ ನೆಡುತೋಪು ಕುರಿತ ನೈಜ ಚಿತ್ರಣ

ತೀರ್ಥಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಲೇಖಕ ಶಿವಾನಂದ ಕರ್ಕಿ, ಹೋರಾಟಗಾರ ನಿಶ್ಚಲ್‌ ಜಾದೂಗಾರ್‌, ಒನ್‌ ಇಂಡಿಯಾ ಡಾಟ್‌ ಕಾಂನ ವ್ಯವಸ್ಥಾಪಕ ಪ್ರಶಾಂತ್‌ ಹುಲ್ಕೋಡು, ಮಲ್ನಾಡ್‌ ಕನ್ಸ್ಟ್ರಕ್ಷನ್‌ ಮುಖ್ಯಸ್ಥ ಶ್ರೀನಂದ ದಬ್ಬಣಗದ್ದೆ ಇದ್ದರು.

ಪತ್ರಕರ್ತ ಶಿವಾನಂದ ಕರ್ಕಿ ಅವರ ಎರಡನೇ ಪುಸ್ತಕ 'ಗರ್ಕು' ಕಾದಂಬರಿ ಮೇ 28ರ ಶನಿವಾರ ಮಧ್ಯಾಹ್ನ 3.30ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬಿಡುಗಡೆಗೊಳ್ಳುತ್ತಿದೆ.

ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕ ಡಾ.ಮೊಗೊಳ್ಳಿ ಗಣೇಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ವಕೀಲ, ಸಂಸ್ಕೃತಿ ಚಿಂತಕ ಕೊಪ್ಪದ ಸುಧೀರ್ ಕುಮಾರ್ ಮುರೊಳ್ಳಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮವು ಶಿವಾನಂದ್ ಕರ್ಕಿ ಅವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲ ಡಾ.ಬಿ.ಗಣಪತಿ ಉತ್ತುಂಗ, ಚಿಂತಕ ನೆಂಪೆ ದೇವರಾಜ್ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ.

ಒಂದು ಕಾಲದಲ್ಲಿ ಮುಳುಗಡೆಯಾದ ಸಹಜ ಅರಣ್ಯಗಳಿಗೆ ಪರಿಯಾಯ ಎಂಬಂತೆ ಸರ್ಕಾರ, ಅರಣ್ಯ ಅಧಿಕಾರಿಗಳಿಂದ ಪ್ರಚಾರ ಪಡೆದಿದ್ದ ಅಕೇಶಿಯಾ ನೆಡುತೋಪು ಕಾಲ ಕ್ರಮೇಣ ಮಲೆನಾಡಿನ ಪರಿಸರ ವೈವಿಧ್ಯತೆಗೆ ಮಾರಕವಾಗುವುದು ಮತ್ತು ಅದು ಗ್ರಾಮೀಣ ಜನಜೀನದ ಪರಿಸರದ ಮೇಲೆ ಉಂಟು ಮಾಡುವ ಪರಿಣಾಮ ಈ ಕಾದಂಬರಿಯ ಕೇಂದ್ರ ಬಿಂದು.

ಪತ್ರಕರ್ತ ಹಾಗೂ ಒನ್‌ ಇಂಡಿಯಾ ಡಾಟ್‌ಕಾಂನ ಪ್ರಶಾಂತ್‌ ಹುಲ್ಕೋಡ್‌ ಮಾತನಾಡಿ, ಕನ್ನಡ ಪತ್ರಿಕೋದ್ಯಮಕ್ಕೆ ಸುದೀರ್ಘವಾದ ಇತಿಹಾಸವಿದೆ. ವಿಶೇಷವೆಂದರೆ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಪತ್ರಕರ್ತರಾಗಿಯೂ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ ಪತ್ರಕರ್ತರು ಸಾಹಿತಿಗಳಾಗಿ ಹೆಸರು ಮಾಡಿದ್ದು ವಿರಳ. ಪತ್ರಕರ್ತನಾಗಿರುವ ಶಿವಾನಂದ್‌ ಈಗಾಗಲೇ ಸಾಹಿತಿಯಾಗಿ ಖಾನೇಷುಮಾರಿಯಂತಹ ಸೊಗಸಾದ ಕೃತಿಯನ್ನು ಸಾಹಿತ್ಯ ರಂಗಕ್ಕೆ ನೀಡಿದ್ದಾರೆ. ಅವರ ಎರಡನೇ ಕೃತಿ ಗರ್ಕು ಪರಿಸರದ ಸ್ಥಿತ್ಯಂತರ ಹಿನ್ನಲೆಯಲ್ಲಿ ನೋಡುವುದಾದರೇ ಜಾಗತಿಕ ಮಟ್ಟದ ಸಮಸ್ಯೆಯನ್ನು ಕೇಂದ್ರ ಬಿಂದುವನ್ನಾಗಿಸಿಕೊಂಡಿದೆ. ಹಾಗಾಗಿ ಈ ಕೃತಿ ಕನ್ನಡ ಸಾಹಿತ್ಯ ಲೋಕದ ಗಮನ ಸೆಳೆಯುವ ವಿಶ್ವಾಸ ಇದೆ ಎಂದರು.
https://forms.gle/7fMhgwQqkS2R4fz9A

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post