ಜಿಲ್ಲಾಧಿಕಾರಿಗಳ ಮಧ್ಯೆ ಪ್ರವೇಶಕ್ಕೆ ಗ್ರಾ.ಪಂ. ಸದಸ್ಯ ಅಣ್ಣಪ್ಪ ಆಗ್ರಹ

ಬಂಡೆ ಕಾರ್ಮಿಕ ಗೊಂದಲ ನಿವಾರಿಸಿ

ಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿಗಳ ಸಂವಾದ ಏರ್ಪಡಿಸಲಿ

ಬೀದಿಗೆ ಬೀಳುವ ಆತಂಕದಲ್ಲಿ ಬಂಡೆ ಕಾರ್ಮಿಕರು

ರಿಂಗ್ ಗೆ ಅಧಿಕಾರಿಗಳ ಬೆಂಬಲ ಆತಂಕ

ಶ್ರಮಿಕ ವರ್ಗದವರನ್ನು ಕತ್ತಲಿಗೆ ತಳ್ಳುವ ಟೆಂಡರ್ ಪ್ರಕ್ರಿಯೆಗೆ ಗ್ರಾ.ಪಂ. ಸದಸ್ಯ ಅಣ್ಣಪ್ಪ ವಿರೋಧ
ಮೇ 25ರ ಬುಧವಾರ ಇಂದು ಕುರುವಳ್ಳಿ ಬಂಡೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕೋಟಿಗಟ್ಟಲೆ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಕಾನೂನು ಬಾಹೀರ ರಿಂಗ್ ಮಾದರಿಯ ಟೆಂಡರ್ ಗೆ ಈಗಾಗಲೇ ವ್ಯವಸ್ಥೆ, ಆಡಳಿತ, ಅಧಿಕಾರಿಗಳು  ಸಹಕಾರ ನೀಡಿ ಹರಸಿದೆ. ಮೇಲಾಗಿ ಅಧಿಕಾರಿಗಳು ಇಷ್ಟುದೊಡ್ಡ ಹಗರಣಕ್ಕೆ ಬೆನ್ನು ತಟ್ಟಿರುವುದು ಜಗಜಾಹೀರಾಗಿದೆ. ಆದರೆ ಇಲ್ಲಿಯವರೆಗೂ ಹೊಟ್ಟೆಪಾಡಿಗಾಗಿ ದುಡಿಯುವ ಶ್ರಮಿಕ ವರ್ಗದವರ ಗೊಂದಲ ಬಗೆಹರಿದಿಲ್ಲ. ತಕ್ಷಣ ಜಿಲ್ಲಾಡಳಿತ ಕಾರ್ಮಿಕರ ಗೊಂದಲ ನಿವಾರಣೆ ಮಾಡಬೇಕು ಎಂದು ಮೇಲಿನ ಕುರುವಳ್ಳಿ ಗ್ರಾ.ಪಂ. ಸದಸ್ಯ ಅಣ್ಣಪ್ಪ ಆಗ್ರಹಿಸಿದ್ದಾರೆ.
ಕುರುವಳ್ಳಿ ಬಂಡೆ ಇಲ್ಲಿಯವರೆಗೆ ಗುತ್ತಿಗೆ ಆಧಾರದ ಮೇಲೆ ನಡೆಯುತ್ತಿತ್ತು. ಇದೀಗ ಹೊಸ ಅದೇಶದಂತೆ ಬಹಿರಂಗ, ಸೀಲ್ಡ್ ಟೆಂಡರ್, ಇ-ಟೆಂಡರ್ ಪ್ರಕ್ರಿಯೆ ಮೂಲಕ ಹರಾಜಾಗುತ್ತಿದೆ. ಸರ್ಕಾರದ ಹರಾಜು ಪ್ರಕ್ರಿಯೆ ಪ್ರಶ್ನಾತೀತ. ಆದರೆ ಒಳಗಿರುವ ಕೆಲವು ಅಧಿಕಾರಿಗಳು ಹಾಗೂ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಕದೀಮರು ರಿಂಗ್ ಮಾದರಿಯ ಟೆಂಡರ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ವಂಚನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರ್ಮಿಕರ ಗೊಂದಲ ಬಗೆಹರಿಸಿ
ಮೇಲಿನ ಕುರುವಳ್ಳಿ, ಕುರುವಳ್ಳಿ ವ್ಯಾಪ್ತಿಯ ಬಂಡೆಯ ಕಾರ್ಮಿಕರು ಈಗಾಗಲೇ ಕೊರೊನಾ ಕಾಲಘಟ್ಟದಲ್ಲಿ ಬಳಲಿ ಬೆಂಡಾಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಮತ್ತೆ ಕಾರ್ಮಿಕರ ಮೇಲೆ ಅಧಿಕಾರಿ ವರ್ಗ, ಗುತ್ತಿಗೆದಾರರು ಇನ್ನೊಂದು ಸುತ್ತಿನ ಸವಾರಿಗೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಬಂಡೆ ಕಾರ್ಮಿಕರ ಗೊಂದಲ ಬಗೆಹರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂವಾದ ಏರ್ಪಡಿಸಬೇಕು. ರಿಂಗ್ ಮಾಡಿಕೊಂಡಿರುವ ಬಿಡ್ಡುದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ. ಸದಸ್ಯ ಅಣ್ಣಪ್ಪ ಹೇಳಿದ್ದಾರೆ.

ಗ್ರಾ.ಪಂ.ಗೆ ನಯಾ ಪೈಸೆ ಆದಾಯ ಇಲ್ಲ...!
ಸ್ಥಳೀಯ ಸರ್ಕಾರ ಗ್ರಾಮ ಪಂಚಾಯಿತಿಗೆ ಒಂದು ನಯಾ ಪೈಸೆ ಆದಾಯ ಬಂಡೆಯಿಂದ ಇಲ್ಲ. ಕೋಟಿಗಟ್ಟಲೇ ವ್ಯವಹಾರ ನಡೆಯುತ್ತಿದ್ದರು ಪಂಚಾಯಿತಿಗೆ ಆದಾಯ ಸಿಗುತ್ತಿಲ್ಲ. ಗ್ರಾಮದ ಬಂಡೆ ಕಾರ್ಮಿಕರ ಮೇಲೆ ನಿರಂತರ ಅಧಿಕಾರಿಗಳು ಶೋಷಣೆ ನಡೆಸುತ್ತಿದ್ದರು ಕೇಳುವ ಅಧಿಕಾರ ಸ್ಥಳೀಯ ಸರ್ಕಾರಕ್ಕೆ ಇಲ್ಲ. ಅಲ್ಲದೇ ಯಾವುದೇ ಆರೋಗ್ಯ ಸಂಬಂಧಿಸಿ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post