ಜಿಲ್ಲಾ ಕಾಂಗ್ರೆಸ್ ಬ್ಯಾನರ್‌ನಲ್ಲಿ ಕಿಮ್ಮನೆ ಹೆಸರಿಲ್ಲ! ಭಾಷಣಕ್ಕೂ ಅವಕಾಶ
ಇಲ್ಲ
ಕಾಂಗ್ರೆಸ್‌ನಲ್ಲಿ ಹಠವಾದಿ ಕಿಮ್ಮನೆಯ ಪೊಸಿಷನ್ ಏನು…?
ಅಚ್ಚರಿಯ ರಾಜಕಾರಣಕ್ಕೆ ತೀರ್ಥಹಳ್ಳಿ ಸಜ್ಜು
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು…?
ಕೆರಳಿ ನಿಂತರೇ ಕಿಮ್ಮನೆ
ಬಿಜೆಪಿ ದುರಾಡಳಿತ ಖಂಡಿಸಿ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಸ್ವಂತ ಊರಾದ
ಗುಡ್ಡೇಕೊಪ್ಪದಿಂದ ಶಿವಮೊಗ್ಗದ ವರೆಗೆ 5 ದಿನ ಸುಮಾರು 70 ಕಿ.ಮೀ. ದೂರ ಪಾದಯಾತ್ರೆ ನಡೆಸಿದ ಕಿಮ್ಮನೆಗೆ
ಕಾಂಗ್ರೆಸ್ ಮುಖಂಡರು ಇದೀಗ ಅಪಮಾನ ಮಾಡಿದ್ದಾರೆಯೇ… ಎಂಬ ಆಕ್ರೋಶದಲ್ಲಿ ಈಗ ಕಿಮ್ಮನೆ ಬೆಂಬಲಿಗರು
ಬೀದಿಗಿಳಿದಿರುವುದು ಕಾಂಗ್ರೆಸ್ ನಲ್ಲಿ ಲೇಟೆಸ್ಟ್ ಬೆಳವಣಿಗೆಯಾಗಿದೆ.
ಹಠವಾದಿ ಕಿಮ್ಮನೆ ಕಾಂಗ್ರೆಸ್ ಮುಖಂಡರ ಈ ವರ್ತನೆಗೆ ಸೆಟೆದು ನಿಲ್ಲುವುದು
ಬಹುತೇಕ ಖಚಿತ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಿನಿಂದಲೂ ಕಿಮ್ಮನೆಗೆ ಬ್ರೇಕ್ ಹಾಕುತ್ತಲೇ
ಇದ್ದಾರೆ. ಇದರ ಮುಂದುವರೆದ ಭಾಗವೇ ಶಿವಮೊಗ್ಗದಲ್ಲಿ ಕಿಮ್ಮನೆಗೆ ಆಗಿರುವ ಅಪಮಾನ. ಹೆಲಿಕಾಪ್ಟರ್
ನಲ್ಲಿ ತೆರಳಬೇಕು ಎಂಬ ಗಡಿಬಿಡಿ ನೆಪದಲ್ಲಿ ಕಿಮ್ಮನೆಗೆ ಭಾಷಣಕ್ಕೆ ಅವಕಾಶ ನೀಡದೇ ಡಿಕೆಶಿ ಸಭೆಯನ್ನು
ಬರ್ಕಾಸ್ಥ್‌ಗೊಳಿಸಿ ಹೊರಟ ಹಿಂದೆ ರಾಜಕೀಯ ಕಾರಣಗಳಿರುವುದು ಗುಟ್ಟಲ್ಲ. ಕ್ಷೇತ್ರದಲ್ಲಿ ಕಿಮ್ಮನೆ
ವಯಕ್ತಿಕ ನೆಲಗಟ್ಟಿನಲ್ಲಿ ಬಾರೀ ಬೆಂಬಲ ಗಳಿಸಿದ್ದು ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಯೇ
ತೀರುತ್ತೇವೆ ಎಂದು ಕಾರ್ಯಕರ್ತರು ಪಣ ತೊಟ್ಟಿರುವುದು ರಾಜಕೀಯವಾಗಿ ಕುತೂಹಲಕಾರಿಯಾಗಿದೆ. ಕಿಮ್ಮನೆ
ರತ್ನಾಕರ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವರೇ, ಇಲ್ಲವೇ ಎಂಬ ಪ್ರಶ್ನೆಯೂ
ಉದ್ಬವಿಸುವಂತೆ ಮಾಡಿದೆ.
ಪ್ರತಿಭಟನಾ ಸಭೆಯಲ್ಲಿ ಕಿಮ್ಮನೆ ಕೇವಲ ಜೈಕಾರ ಹಾಕಿ ವೇದಿಕೆಯಿಂದ ಕೆಳಗಿಳಿದು
ತೆರಳಿದ್ದು ಕಾರ್ಯಕರ್ತರ ದುಃಖಕ್ಕೆ ಕಾರಣವಾಗಿದ್ದು, ಜಿಲ್ಲಾ ಕಾಂಗ್ರೆಸ್‌ನ ಕೆಲ ಮುಖಂಡರ ಕುತಂತ್ರವೇ
ಈ ಬೆಳವಣಿಗೆಗೆ ಕಾರಣವೆಂಬುದು ಕಾರ್ಯಕರ್ತರ ದೂರಾಗಿದೆ.
ಕಿಮ್ಮನೆ ಈಗಿನ ಬೆಳವಣಿಗೆಯಿಂದ ಮನನೊಂದು ರಾಜಕೀಯವಾಗಿ ಬೇರೆಯೇ ನಿರ್ಧಾರ
ತಳೆದರೂ ಅಚ್ಚರಿ ಇಲ್ಲ. “ಡಾಕ್ಟರ್ ಹೇಳಿದ್ದು ಹಾಲು ಅನ್ನ, ರೋಗಿ
ಬಯಸಿದ್ದು ಹಾಲು ಅನ್ನ” ಎಂಬಂತೆ ಕಾಂಗ್ರೆಸ್‌ನಲ್ಲಿನ ಒಳ ಜಗಳವನ್ನು
ಕ್ಷೇತ್ರದಲ್ಲಿ ಬಿಜೆಪಿ ಹದ್ದುಗಣ್ಣಿನಿಂದ ಕಾಯುತ್ತಿದೆ.
