ಗೃಹಸಚಿವರ ತವರೂರು ಆರಗದಲ್ಲಿ ಕುಡುಕರ ಆವಳಿ
ಪ್ರತ್ಯಕ್ಷದರ್ಶಿ ಪೊಲೀಸ್ ಅಧಿಕಾರಿ ಸುಮ್ಮನಾಗಿದ್ಯಾಕೆ...?
ಗೃಹಸಚಿವರ ತವರೂರು ಅವರಗದಲ್ಲಿ ಕುಡುಕರ ಹಾವಳಿ ಮಿತಿ ಮೀರಿದೆ. ಪ್ರತಿನಿತ್ಯ ಸರ್ಕಲ್ ಬಳಿ ಗಲಾಟೆ ದೊಂಬಿ ಎಸಗುವ ಪುಂಡುರು ಸೋಮವಾರ ರಾತ್ರಿ ಪತಿಯ ಎದುರಲ್ಲೇ ದಲಿತ ಮಹಿಳೆಯೊಬ್ಬರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಮಹಿಳೆ ಪತಿಯೊಂದಿಗೆ ಮನೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತ್ಯಕ್ಷವಾಗಿ ಪ್ರಕರಣವನ್ನು ಕಣ್ತುಂಬಿಕೊಂಡಿದ್ದಾರೆ. ಆರಗ ಭಾಗದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವುದನ್ನು ತಪ್ಪಿಸಲು ಪ್ರಯತ್ನ ನಡೆದಿದೆ. ದಲಿತ ಮುಖಂಡರೂ ಕೂಡ ಒತ್ತಡವನ್ನು ಹಾಕುತ್ತಿದ್ದರು ಪ್ರಯೋಜನವಾಗುತ್ತಿಲ್ಲ.
ಪುಂಡ ಕುಡುಕರಿಂದ ಆರಗದ ಗೇಟ್ ನಲ್ಲಿ ಸಭ್ಯರು ಸಂಚಾರ, ವಾಸ ಮಾಡದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ರಾಜಕೀಯ ಪ್ರಭಾವದ ಪ್ರತಾಪ ಕೂಡ ಇರುವುದರಿಂದ ಮತ್ತಷ್ಟು ಸೊಕ್ಕಿರುವಂತೆ ಕಾಣುತ್ತಿದೆ. ಏನೇ ಆಗಲಿ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಜೊತೆಗೆ, ಅವಾಚ್ಯ ಶಬ್ದ, ವಗೈರೆ ಪ್ರಕರಣವನ್ನು ಕಣ್ಣುತುಂಬಿಕೊಂಡ ಪೊಲೀಸ್ ಅಧಿಕಾರಿ ಕರ್ತವ್ಯ ಪ್ರಜ್ಞೆ ಮರೆಯಬಾರದಿತ್ತು. ತುಂಬಿಸಿಕೊಳ್ಳುವ ಪ್ರವೃತ್ತಿ ಬಿಡುವ ಅವಶ್ಯಕತೆ ಎದ್ದು ತೋರುತ್ತಿದೆ.
Tags:
ಪೋಕ್ಸೊ