No title

ಉಪಜಾತಿ ಪ್ರಚೋಧಿತ ಹಿಂದೂ ಧರ್ಮಕ್ಕೆ ಬೆಲೆ ಇಲ್ಲ

ವ್ಯಕ್ತಿ ಕೊಲೆಗಿಂತ ಮನಸ್ಸಿನ ಕಗ್ಗೊಲೆ ಅಪಾಯಕಾರಿ ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮಾತನಾಡಿದರು.

ಗೃಹಸಚಿವ ಆರಗ ಜ್ಞಾನೇಂದ್ರ ಕಾಲ ಘಟ್ಟದಲ್ಲಿ ಪೊಲೀಸರಿಗೆ ಕೇಸರಿ ಬಟ್ಟೆ ಹಾಕಿಸಲಿ. ಬಿಜೆಪಿಯೇತರರ ದೂರುಗಳು ಠಾಣೆಯಲ್ಲಿ ದಾಖಲಾಗುವುದಿಲ್ಲ. ಬುಕ್ಲಾಪುರ ಕ್ವಾರೆಯಲ್ಲಿ ದಿನವೊಂದಕ್ಕೆ 5 ಲಕ್ಷ ವ್ಯವಹಾರ ನಡೆಯುತ್ತಿದೆ. ಬಿಜೆಪಿಗರು ದಂಧೆಯಲ್ಲಿ ತೊಡಗಿದ್ದಾರೆ. ಬದೂಕು ತರಬೇತಿ ಹೆಸರಿನಲ್ಲಿ 26 ಲಕ್ಷ ಸಂಗ್ರಹಿಸಲಾಗಿದೆ. 4200 ರೂಪಾಯಿ ಖರ್ಚಿನ ಅಗತ್ಯವೇನಿದೆ. ಎಸ್‌ಪಿ, ಡಿವೈಎಸ್‌, ಸಚಿವರು ಇದಕ್ಕೆ ಸ್ಪಷ್ಟನೆ ನೀಡದಿದ್ದರೆ ಠಾಣೆಯ ಮುಂಭಾಗ ಧರಣಿ ನಡೆಸುವುದಾಗಿ ಕಿಮ್ಮನೆ ರತ್ನಾಕರ್‌ ತಿಳಿಸಿದ್ದಾರೆ.



ತೀರ್ಥಹಳ್ಳಿ: ಬಿಜೆಪಿ ಮುಖಂಡರು ಉಪ ಜಾತಿಗಳ ಮಾನ್ಯತೆಯ ಹಕ್ಕಿಗಾಗಿ ಬೇಡಿಕೆ ನೀಡುತ್ತಿರುವ ಸಂದರ್ಭದಲ್ಲಿ ಹಿಂದೂ ಒಂದು ಎಂಬ ಧಾರ್ಮಿಕ ಪ್ರಚೋದನೆಗೆ ಬೆಲೆ ಇಲ್ಲ. ಮಹಾತ್ಮ ಗಾಂಧಿ ಒಕ್ಕೂಟ ಭಾರತ ನೀಡಿದ್ದರು. ಇದೇ ರೀತಿ ಧರ್ಮದ ಅಮುಲು ಹೆಚ್ಚಾದರೆ ಭಾರತ 20 ಛಿದ್ರವಾಗಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಎಚ್ಚರಿಸಿದರು.

ಶುಕ್ರವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿ, ಪುಟಿನ್‌ ಉಕ್ರೇನ್‌ ಮೇಲೆ ದಾಳಿ ನಡೆಸಿದ್ರೆ, ಮೋದಿ ಜನರ ಮನಸ್ಸನ್ನು ಧರ್ಮದ ಹೆಸರಿನಲ್ಲಿ ಕಲುಷಿತ ಮಾಡುತ್ತಿದ್ದಾರೆ. ಮೋದಿಗೂ ಪುಟಿನ್‌ ಗೂ ಯಾವುದೇ ವ್ಯತ್ಯಾಸ ಇಲ್ಲ ಎಂದರು.

ಜನೋಪಯೋಗಿ ಯೋಜನೆ ಜಾರಿ ಮಾಡದೆ ಧರ್ಮದ ಆಧಾರದ ಮೇಲೆ 8 ವರ್ಷಗಳು ಕೇಂದ್ರದ ಆಡಳಿತ ಇದೆ. ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಇದರ ನಡುವೆ ಆರ್ಟಿಕಲ್‌ 370, ತ್ರಿವಳಿ ತಲಾಕ್‌, ಗೋವು ಸಂರಕ್ಷಣೆ, ಬಾಬರಿ ಮಸೀದಿ, ಈದ್ಗಾ ಮೈದಾನ, ದತ್ತಪೀಠ, ಹಿಜಾಬ್‌ ಎಲ್ಲ ಕಾಯ್ದೆ ಧರ್ಮದ ಪ್ರಚೋದನೆಗೆ ಬಳಸಲಾಗಿದೆ ಎಂದು ದೂರಿದರು.

ಬಿಜೆಪಿ ನಾಯಕರು ದೃಶ್ಯ ಮಾಧ್ಯಮ ನಡೆಸುತ್ತಿದ್ದಾರೆ. ಹಾಗಾಗಿ ಸುದ್ದಿಗಳು ಪಕ್ಷ ಕೇಂದ್ರಿತ ಪ್ರಸರಣದಲ್ಲಿ ತೊಡಗಿವೆ. ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬ ತಪ್ಪು ಮಾಡಿದರೆ 50 ಜನ ಅದರ ವಿರುದ್ಧ ನಿಲ್ಲುತ್ತಾರೆ. ಬಿಜೆಪಿ ಪಕ್ಷದಲ್ಲಿ ತದ್ವಿರುದ್ದ ಕಲ್ಪನೆ ಬೆಳೆಸಲಾಗಿದೆ. ಆಂತರಿಕ ಸ್ವಾತಂತ್ರ್ಯ ಕಳೆದುಕೊಂಡವರು ಬಿಜೆಪಿಯೊಳಗೆ ಬದುಕುತ್ತಾರೆ ಎಂದು ಕಿಮ್ಮನೆ ಟೀಕಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಎಸ್‌. ನಾರಾಯಣ ರಾವ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಮುಂಖಡರಾದ ಬೇಡನಬೈಲು ಯಲ್ಲಪ್ಪ, ವಿಲಿಯಂ ಮಾರ್ಟೀಸ್‌, ಮಂಜುನಾಥ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

2 Comments

  1. ಚೆನ್ನಾಗಿದೆ

    ReplyDelete
  2. ಮರಳಿ ಯತ್ನ ಶುಭ ಹಾರೈಕೆ ಇರಲಿ.

    ReplyDelete
Previous Post Next Post