No title

 ಕೈಗಾರಿಕೆ ಮೇಲೆ ಭಾರತ ನಿಂತಿರುವುದು ಅಪಾಯಕಾರಿ

ತೀರ್ಥಹಳ್ಳಿಯ ವಿದ್ಯಾಧಿರಾಜ ಸಭಾ ಭವನದಲ್ಲಿ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗದ ಮೂರು ದಿನ ಕಾರ್ಯಗಾರ ಉದ್ಘಾಟನೆಗೊಂಡಿತು.

ತೀರ್ಥಹಳ್ಳಿ: ನೆಹರು ಪ್ರಕಾರ 1947ನಂತರ ಭಾರತ ಸ್ವಾತಂತ್ರ್ಯವಾಗಿದೆ. ಆ ಉದ್ದೇಶಕ್ಕೆ ಕೈಗಾರಿಕೆಯ ಆಧಾರದ ಮೇಲೆ ದೇಶ ಕಟ್ಟಲಾಗಿದೆ. ಇಲ್ಲಿನ ರೈತರು, ನೆಲದ ಸಂಸ್ಕೃತಿಯನ್ನು ನಿರ್ಲಕ್ಷಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದು ರಾಜ್ಯ ಬಿಜೆಪಿ ಪ್ರಕೋಷ್ಟದ ಸಂಯೋಜಕ ಭಾನು ಪ್ರಕಾಶ್ ಹೇಳಿದರು.

ಶುಕ್ರವಾರ ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಶಿಕ್ಷಣ ವರ್ಗದ ಮೂರು ದಿನಗಳ ಅತ್ಮಾವಲೋಕನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಅಹಿಂಸಾ ಮಾರ್ಗದಿಂದ ಪಡೆಯಲಾಗಿದೆ ಎಂಬ ವಾದ ಇದೆ. ಹಿಂಸಾ ಮಾರ್ಗವಿಲ್ಲದೆ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ. ಬ್ರಿಟೀಷರಿಗೆ ಮನವಿ ಸಲ್ಲಿಸಿದ್ದರಿಂದ ಭಾರತ ಬಿಟ್ಟು ತೊಲಗಲಿಲ್ಲ. ವರ್ತಮಾನದ ಆಗು ಹೋಗುಗಳ ಪರಿಚಯ ಇಲ್ಲದಿದ್ದರೆ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ದೇಶ ಕಟ್ಟಲು ಭೂತ ಕಾಲದ ಪರಿಜ್ಞಾನ ಬೇಕು ಎಂದರು.

ಸಮಾಜವಾದದ ನಂತರ ಜನಸಂಘ ತೀರ್ಥಹಳ್ಳಿಯಲ್ಲಿ ತಳ ಊರಿತ್ತು. ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ. ಕಾರ್ಯಗಾರ ಮನಸ್ಸನ್ನು ಸ್ಥಿಮಿತಕ್ಕೆ ತರಲು ಸಹಾಯವಾಗಿದೆ. ವರ್ಷಕ್ಕೊಮ್ಮೆ ಎಡೆ ಇಡುವ ಕಾರ್ಯಕ್ರಮವಾಗದೆ ವೈಚಾರಿಕವಾಗಿ ಗಟ್ಟಿ ಇದ್ದೇವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವ ಕೆಲಸ ಆಗಲಿ ಎಂದರು ತಿಳಿಸಿದರು.

ನಮ್ಮೊಳಗೆ ರಾಜಕೀಯದ ಆಸೆ, ಆಕಾಂಕ್ಷೆಗಳು ಈಗ ಹೆಚ್ಚಾಗಿದೆ. ಆರಂಭದ ದಿನದಲ್ಲಿ ಖಾಲಿ ಕೈಗಳಿಂದ ಆರಂಭಿಸಿದ್ದೇವೆ. ಇದ್ದ ಹುದ್ದೆಯನ್ನು ತ್ಯಜಿಸಿ ಶ್ಯಾಮ ಪ್ರಸಾದ ಮುಖರ್ಜಿ ಪಕ್ಷ ಕಟ್ಟಿದ್ದಾರೆ. ಅದೇ ರೀತಿ ಕಾರ್ಯ ಕೇಂದ್ರಿತ ಕಾರ್ಯಕರ್ತರ ನಿರ್ಮಾಣವಾಗಬೇಕು ಎಂದು ಭಾನು ಪ್ರಕಾಶ್‌ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ವಹಿಸಿದ್ದರು. ಬಿಜೆಪಿ ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್, ವಿಭಾಗ ಸಂಚಾಲಕ ಎನ್.ಎಸ್. ಹೆಗಡೆ, ಮಂಡಲ ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಇದ್ದರು. ಅರಂವಿಂದ್ ಸ್ವಾಗತಿಸಿದರು. ನವೀನ್ ಹೆದ್ದೂರು ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post