ಟಿಎಪಿಸಿಎಂಎಸ್ ಸಂಸ್ಥೆಗೆ ಅಮೃತ ಸಂಭ್ರಮ

ಅದ್ದೂರಿಯಾಗಿ ಆಚರಣೆ ಮಾಡಲು ಸಿದ್ಧತೆ
ಕಾರ್ಯಕ್ರಮಕ್ಕೆ ಸಂಸದ ಬಿ ವೈ ರಾಘವೇಂದ್ರ
1949ರಲ್ಲಿ ಸ್ವತಂತ್ರ ಸೇನಾನಿ ದೇವಂಗಿ ಮಾನಪ್ಪರಿಂದ ಸ್ಥಾಪನೆಗೊಂಡ ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್‌) ಅಮೃತ ಮಹೋತ್ಸವ ಆಚರಣೆ ಮಾಡುತ್ತಿದೆ ಸಂಸ್ಥೆ ಕೇವಲ ಲಾಭದ ಹಿಂದೆ ಹೋಗದೆ ರೈತರ ಹಿತ ಕಾಯುತ್ತಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದರು.
ವಾರ್ಷಿಕ 150.76 ಕೋಟಿ ವಹಿವಾಟು ನಡೆಸಿ 30.42 ಲಕ್ಷ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಅಮೃತ ಮಹೋತ್ಸವದ ಪ್ರಯುಕ್ತ ಶೇಕಡಾ 10 ರಷ್ಟು ವಿಶೇಷ ಡಿವಿಡೆಂಡ್ ಸೇರಿ ಒಟ್ಟು ಶೇಕಡಾ 25 ರಷ್ಟು ಡಿವಿಡೆಂಟ್‌ ಹಂಚಲು ನಿರ್ಧರಿಸಲಾಗಿದೆ.
ಸಂಘ ನಡೆದು ಬಂದ ಹಾದಿ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗುತ್ತಿದೆ 
ಎಂದು ಹೇಳಿದರು.
ಆಡಳಿತ ಮಂಡಳಿ ಚುನಾವಣೆ ಹಿರಿಯ ಸಹಕಾರಿಗಳ ಸಹಕಾರದಿಂದ ಎಲ್ಲಾ ಸ್ಥಾನಗಳಿಗೂ ಸದಸ್ಯರನ್ನು ಅವಿರೋಧವಾಗಿ ಆಯ್ಕೆಯಾಗಿದೆ. ಇದರಿಂದ ಹೆಚ್ಚುವರಿ ವೆಚ್ಚ ಇಲ್ಲದೆ ಸಂಸ್ಥೆಗೆ ಲಾಭವಾಗಿದೆ. ಆಡಿಟ್‌ ವರ್ಗೀಕರಣದಲ್ಲಿ ಸತತವಾಗಿ ಎ ವರ್ಗೀಕರಣ ಲಭಿಸಿದೆ. 75 ವರ್ಷದ ಸಂಭ್ರಮಾಚರಣೆ ನೆನಪಿಗಾಗಿ ಕಟ್ಟಡ ನವೀಕರಣ, ಹೊಸ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ನುಡಿದರು.
ವ್ಯಾಪಾರ ವಿಭಾಗದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ವ್ಯವಸಾಯ ಉಪಕರಣ, ಆರ್‌ಸಿಸಿ ಪೈಪ್‌, ಕಾಂಕ್ರಿಟ್‌ ಸಾಮಗ್ರಿ, ಮದ್ದುಗುಂಡು ಮಾರಾಟದಿಂದ 33 ಲಕ್ಷ, ಅಕ್ಕಿಗಿರಣಿ ವಿಭಾಗದಲ್ಲಿ 1.4 ಲಕ್ಷ, ಅಡಿಕೆ ಕಮಿಷನ್‌ ವ್ಯವಹಾರದಲ್ಲಿ 9 ಲಕ್ಷ, ಕಟ್ಟಡ ಬಾಡಿಗೆಯಿಂದ 33 ಲಕ್ಷ ಆದಾಯ ಪಡೆದಿದೆ ಎಂದರು.
ಜಿಲ್ಲಾ ಬ್ಯಾಂಕ್‌ ಪ್ರತಿನಿಧಿ ಬಸವಾನಿ ವಿಜಯದೇವ್‌ ಮಾತನಾಡಿ ಟಿಎಪಿಸಿಎಂಎಸ್ ಸಂಸ್ಥೆ ಕಾರಣ ಮಾರುಕಟ್ಟೆಯಲ್ಲಿ ರೈತರ ಉಪಯೋಗಿಸಿ ವಸ್ತುಗಳು ನಿಯಂತ್ರಣದಲ್ಲಿವೆ ಮತ್ತು ಇಲ್ಲಿ ಉತ್ತಮ ಗುಣ ಮಟ್ಟದ ವಸ್ತುಗಳನ್ನು ಮಾರಲಾಗುತ್ತದೆ ಎಂದರು.
ಉಪಾಧ್ಯಕ್ಷ ಶಿವಕುಮಾರ್‌ ಕೆ.ಎಸ್., ನಿರ್ದೇಶಕರಾದ ಅಂಜುರ ಕೆ.ವಿ, ಅಭಿನಂದನ್‌ ಎಚ್.ಜೆ., ದೇವರಾಜ ಡಿ, ರಮೇಶ್‌ ಕೆ.ಎಸ್., ಸತೀಶ ಎಂ.ಆರ್‌, ಹರೀಶ ಡಿ.ಜಿ., ರಾಘವೇಂದ್ರ ಕೆ.ಎನ್‌., ವಾಸುದೇವ ಎನ್.ಜಿ, ವಿಶ್ವನಾಥ ಡಿ.ಸಿ., ನಾಗರತ್ನಾ ಮುರುಘರಾಜ್‌, ವಿನಂತಿ ಪ್ರಭಾಕರ, ರಾಘವೇಂದ್ರ ಎಸ್., ಚಂದ್ರಶೇಖರ್‌ ಎಂ.ವಿ., ಕಾರ್ಯದರ್ಶಿ ರಚನಾ ಹೆಚ್.ಜಿ. ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post