ಪುತ್ರನ ಹುಟ್ಟುಹಬ್ಬದ ಸಂತೋಷಕ್ಕಾಗಿ ಕೊಡುಗೆ
ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ನೀಡಿದ ಪೋಷಕಿ
ತೀರ್ಥಹಳ್ಳಿಯ ಹೊನ್ನೇತ್ತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪೋಷಕರೊಬ್ಬರು 1.2 ಲಕ್ಷ ದೇಣಿಗೆ ನೀಡುವ ಮೂಲಕ ಪುತ್ರನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಇದೇ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ಹೇಮಾವತಿ ಮತ್ತು ಮನಸಗಾರ್ ಟೀಕಪ್ಪ ಗೌಡ ದಂಪತಿಯ ಪುತ್ರಿ ಚೇತನಾ ರಾಜಶೇಖರ್ ದೇಣಿಗೆ ನೀಡಿದವರು. ಇವರ ಪುತ್ರ ಸಾಯಿ ಸೂರ್ಯ ಬೆಂಗಳೂರಿನಲ್ಲಿ ಪ್ರೀ ಕೆಜಿ ಕಲಿಯುತ್ತಿದ್ದಾನೆ.
1.2 ಲಕ್ಷವನ್ನು ಠೇವಣಿ ಇಟ್ಟು, ಅದರಿಂದ ಬಂದ ಬಡ್ಡಿಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಸರಳವಾಗಿ ವಿವಾಹವಾಗಿ ಉಳಿತಾಯದ ಹಣದಲ್ಲಿ ಶಾಲೆಯ ಅಭಿವೃದ್ಧಿಗೆ ಚೇತನಾ 50,000 ದೇಣಿಗೆ ನೀಡಿದ್ದರು.
ಮುಖ್ಯ ಶಿಕ್ಷಕಿ ಅಶ್ವಿನಿ ಎಚ್.ಎಸ್., ಸಹ ಶಿಕ್ಷಕಿ ಮಹದೇವಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಎ.ಜಿ.ನಿತ್ಯಾನಂದ ಇದ್ದರು.