ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಅಂಕನಕುಡಿಗೆ ವಾಸಿ ಹೆಸರಾಂತ ಕ್ರೀಡಾಪಟು ಕಾರ್ಗಲ್ ಗೋಪಾಲ್ ರಾವ್ ಮತ್ತು ಜಯಾ ಜಿ ರಾವ್ ಮೊಮ್ಮಗಳು, ಬೆಂಗಳೂರು ವಾಸಿ ರಮ್ಯ ಮತ್ತು ಸುಧೀರ್ ರಾವ್ ಪುತ್ರಿ ಆದ್ಯ ಎಸ್. ಮಾನೆ ಕರ್ನಾಟಕ ರಾಜ್ಯ ಮಹಾರಾಣಿ ಕ್ರಿಕೆಟ್ ಕಪ್-2026 ಕ್ಕೆ ಆಲ್ ರಂಡರ್ ಆಟಗಾರ್ತಿಯಾಗಿ ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಹಿಳಾ ಕ್ರಿಕೆಟ್ ಕಪ್ 2026ರ ಹರಾಜು ಪ್ರಕ್ರಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ ಆಯ್ಕೆಯಾಗಿದ್ದು, ಈಕೆ ಅತ್ಯುತ್ತಮ ಲೆಗ್ ಸ್ಪಿನ್ನರ್ ಹಾಗೂ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಆಟಗಾರ್ತಿ ಬೆಂಗಳೂರಿನ ಪ್ರತಿಷ್ಠಿತ ಎಂ.ಸಿ.ಸಿ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪ್ರತಿಭಾವಂತ ಯುವ ಕ್ರಿಕೆಟ್ ಆಟಗಾರ್ತಿಯ ಸಾಧನೆಯ ಬಗ್ಗೆ ಕ್ರೀಡಾಭಿಮಾನಿಗಳು ಅಪಾರ ನಿರೀಕ್ಷೆಯಲ್ಲಿದ್ದಾರೆ.