ಶಾಸಕರೇ ಬಿಡುವಿದ್ದರೆ ಮೃಗವಧೆಗೆ ಬನ್ನಿ, ದೇವರ ಮುಂದೆ ಪ್ರಮಾಣ ಮಾಡೋಣ
ಬಿ ವರ್ಗದ ದೇವಸ್ಥಾನವಾದರೆ ನಿಮಗೇಕೆ ಭಯ – ಪಣಿರಾಜ್ ಕಟ್ಟೇಹಕ್ಕಲು
ಶಾಸಕ ಆರಗ ಜ್ಞಾನೇಂದ್ರ
ಅವರು ಮಾಜಿ ಗೃಹಮಂತ್ರಿ ಎಂಬುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯನಂತೆ ಮಾತನಾಡುತ್ತಿರುವುದು ವಿಪರ್ಯಾಸ.
ಮೃಗವಧೆ ದೇವಸ್ಥಾನಕ್ಕೆ ಒಂದು ಹೈಮಾಸ್ಕ್ ದೀಪ ಬೇಕು ಎಂದು ನನ್ನ ಹತ್ತಿರ ದೇವಾಲಯದ ಪರವಾಗಿ ಬೇಡಿಕೆ
ಇಡುವುದರ ಜೊತೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಹೆಸರಿನಲ್ಲಿ ಮನವಿ ಪತ್ರವನ್ನು ನೀಡಿದ್ದೇ ಆಗ
ಹಾಲಿ ಸದಸ್ಯರಾಗಿದ್ದ ಮೃಗವಧೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಾಮನಿರ್ದೇಶನ ಸದಸ್ಯ ಮತ್ತು ನನ್ನ
ವಿರುದ್ಧ ಹೇಳಿಕೆ ನೀಡುವಾಗ ಶಾಸಕರ ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ಕಾನುಕೊಪ್ಪ ಶಿವಕುಮಾರ್.
ಪತ್ರವನ್ನು ಸಂಬಂಧಿಸಿದವರಿಗೆ
ರವಾನಿಸಿರುವುದು ಮಾತ್ರ ನನ್ನ ಕೆಲಸ. ಕಾರಣ ನಮ್ಮ ಭಾಗದ ಪ್ರಸಿದ್ಧ ದೇವಾಲಯ ಅಲ್ಲಿ ಹೈಮಾಸ್ಕ್ ದೀಪ
ಅಳವಡಿಸುವುದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂಬ ಕಾರಣಕ್ಕೆ ಜವಾಬ್ದಾರಿ ನಿಭಾಯಿಸಿದ್ದೇನೆ. ಆ ದೀಪವನ್ನು
ಎಲ್ಲಿ ಅಳವಡಿಸಬೇಕು ಎಂಬುದರಿಂದ ಹಿಡಿದು ಎಲ್ಲಾ ರೀತಿಯ ಜವಾಬ್ದಾರಿ ವಹಿಸಿದ್ದು ಶಿವಕುಮಾರ್. ಹಾಗಾಗಿ
ಅಲ್ಲಿ ಅವ್ಯವಹಾರ ಆಗಿದ್ದರೆ ಅವರೇ ಹೊರತು ನಾನಲ್ಲ ಎಂದು ಶೇಡ್ಗಾರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ,
ಯುವ ಕಾಂಗ್ರೆಸ್ ಮುಖಂಡರ ಪಣಿರಾಜ್ ಕಟ್ಟೇಹಕ್ಕಲು ಹೇಳಿದ್ದಾರೆ.
ಇದೆಲ್ಲಾ ನನ್ನ ವಯಸ್ಸಿನ
ನಾಲ್ಕು ಪಟ್ಟು ದೊಡ್ಡವರಾಗಿರುವ ಆರಗ ಜ್ಞಾನೇಂದ್ರರಿಗೆ ತಿಳಿದಿರುವುದು ವಿಷಾಧ ಎನಿಸುತ್ತದೆ. ದೇವರು
ಬಗ್ಗೆ ಬೂಟಾಟಿಕೆ ಭಕ್ತಿ ತೋರಿಸುವ ಶಾಸಕ ಆರಗ ಜ್ಞಾನೇಂದ್ರ ಇತಿಹಾಸ ಪ್ರಸಿದ್ಧ ಸೀಮೆ ದೇವರು ಮೇಳಿಗೆ
ಶ್ರೀ ವೆಂಕಟರಮಣ ದೇವಾಲಯ ಮತ್ತು ಶ್ರೀ ರಾಮೇಶ್ವರ ದೇವಾಲಯ ರಥಚಕ್ರ ಅಳವಡಿಕೆಯಲ್ಲಿ ಯಾವ ರೀತಿಯ ಕಿರುಕುಳ
ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ದೇವರ ದುಡ್ಡು ತಿಂದು ಸಮರ್ಥನೆ ಮಾಡುವ ಸಂಸ್ಕೃತಿ ಯಾವ
ಪಕ್ಷದ್ದು ಎನ್ನುವುದನ್ನು ಇಡೀ ದೇಶದ ಜನತೆ ಕಂಡಿದ್ದಾರೆ ಎಂದವರು ಹೇಳಿದ್ದಾರೆ.
ಶಾಸಕರೇ ನಾನು ದೇವಸ್ಥಾನದ
ಸುತ್ತಮುತ್ತಲು ವಿದ್ಯುತ್ ದೀಪ ಅಳವಡಿಸಲು ಪತ್ರವನ್ನು ಮಾತ್ರ ಸಂಬಂಧಿಸಿದವರಿಗೆ ತಲುಪಿಸಲು ಕೆಲಸ
ನಿರ್ವಹಿಸಿದ್ದೇನೆ. ಆದರೆ ಇದನ್ನೇ ನೆಪ ಮಾಡಿಕೊಂಡು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುವ
ಶಾಸಕರು ಈವರೆಗೆ ಮೃಗವಧೆ ದೇವಸ್ಥಾನ ಅಭಿವೃದ್ಧಿಗಾಗಿ ಯಾವ ಶ್ರಮವನ್ನು ಹಾಕಿದ್ದಾರೆ. ಎಷ್ಟು ಅನುದಾನವನ್ನು
ಕೊಡಿಸಿದ್ದಾರೆ ಎಂಬುದನ್ನು ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಬೇಕು. ದೇವಸ್ಥಾನದ ಹೆಸರಿನಲ್ಲಿ ರಾಜಕೀಯ
ಮಾಡುವ ನೀವು ಅಭಿವೃದ್ಧಿ ವಿಷಯದಲ್ಲಿ ಮಾತ್ರ ಯಾಕೆ ಮಾತಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮನ ಹೆಸರು
ಹೇಳಿ ಅವನ ಜಮೀನನ್ನು ಹೇಗೆ ಲಪಟಾಯಿಸಲಾಗಿದೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ದೇವರ ಬಗ್ಗೆ
ನಮಗೆ ನಿಜವಾದ ಭಕ್ತಿ ಇದೆ. ಈ ವಿಚಾರದಲ್ಲಿ ನಾವು ತಪ್ಪು ಮಾಡಿಲ್ಲ ಎಂದು ಮೃಗವಧೆಯಲ್ಲಿಯೇ ಸಾರ್ವಜನಿಕರ
ಎದುರು ಪ್ರಮಾಣ ಮಾಡುತ್ತೇನೆ. ಬಿಡುವಿದ್ದರೆ ಸುಳ್ಳು ಆರೋಪ ಮಾಡಿರುವ ಆರಗ ಜ್ಞಾನೇಂದ್ರ ಕೂಡ ಬಂದು
ಪ್ರಮಾಣ ಮಾಡಲಿ. ಈ ಅವ್ಯವಹಾರದ ಕುರಿತು ಅವರಿಗೆ ಇಷ್ಟ ಬಂದ ತನಿಖೆ ಮಾಡಿಸಲಿ. ಇದರ ಜೊತೆಗೆ ಸಂಸದರ
ನಿಧಿಯಿಂದ ಇಡೀ ಕ್ಷೇತ್ರದಾದ್ಯಂತ ಅಳವಡಿಸಲಾಗಿರುವ ಹೈಮಾಸ್ಕ್ ದೀಪಗಳ ಅಳವಡಿಕೆಯಲ್ಲಿ ಎಷ್ಟು ಅವ್ಯವಹಾರ
ಆಗಿದೆ ಎಂಬುದನ್ನು ಸೇರಿಸಿ ತನಿಖೆ ಮಾಡಲಿ. ಅಲ್ಲೂ ಕೂಡ ಯಾರ ಪಾತ್ರ ಇದೆ ಎಂಬುದು ಬಯಲಿಗೆ ಬರಲಿ ಎಂದು
ಪಣಿರಾಜ್ ಆಗ್ರಹಿಸಿದ್ದಾರೆ.
ಮೃಗವಧೆ ದೇವಸ್ಥಾನ
5 ಲಕ್ಷ ಮೇಲ್ಪಟ್ಟ ಆದಾಯವನ್ನು ಹೊಂದಿರುವ ಹಿನ್ನಲೆಯಲ್ಲಿ ಪ್ರವರ್ಗ ಬಿ ಸಂಸ್ಥೆಯೆಂದು ಸರ್ಕಾರದ ಮಾನದಂಡಗಳ
ಪ್ರಕಾರ ಗುರುತಿಸಿದೆ. ಅದನ್ನು ಪ್ರವರ್ಗ ಸಿ ಸಂಸ್ಥೆಯೆಂದು ಪುನರ್ ಘೋಷಿಸಬೇಕೆಂದು ಧಾರ್ಮಿಕ ದತ್ತಿ
ಇಲಾಖೆ ಬೆಂಗಳೂರಿನ ಉಪ ಆಯುಕ್ತರಿಗೆ ಪತ್ರವನ್ನು ಶಾಸಕರು ಯಾಕೆ ನೀಡಿದ್ದಾರೆ ಎಂದು ಸಾರ್ವಜನಿಕವಾಗಿ
ಬಹಿರಂಗಪಡಿಸಬೇಕು. ಸಿ ವರ್ಗದ ದೇವಸ್ಥಾನದಲ್ಲಿ ಲೆಕ್ಕಪರಿಶೋಧನೆಯ ಸಮಸ್ಯೆ ಇರುವುದಿಲ್ಲ. ಸ್ಥಳೀಯ
ವ್ಯವಸ್ಥೆಯೇ ಅದನ್ನು ನಿರ್ವಹಿಸುತ್ತದೆ. ಹಾಗಾಗಿ ತಮ್ಮ ಹಿಂಬಾಲಕರ ಆಟ ನಡೆಯುತ್ತದೆ ಎಂಬುದಕ್ಕಾಗಿಯೇ
ಮಾಡಿದ್ದಾರೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಬಿ ವರ್ಗದ ದೇವಸ್ಥಾನದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತದೆ
ಎಂಬ ಭಯವಿದೆಯೇ ಅಥವಾ ನಿಮ್ಮ ಶಿಷ್ಯಂದಿರ ದೇವಸ್ಥಾನದಲ್ಲಿ ನಡೆಸುತ್ತಿರುವ ವಹಿವಾಟು ಬಯಲಿಗೆ ಬರುತ್ತದೆ
ಎಂಬ ಆತಂಕವೇ ಎಂದು ಪಣಿರಾಜ್ ಕುಟುಕಿದ್ದಾರೆ.
