ಸ್ವಾಮಿತ್ವ ಯೋಜನೆಯಡಿ ನಿಮ್ಮ ಆಸ್ತಿ ನೊಂದಾಯಿಸಿಕೊಳ್ಳಿ

ಮಲೆನಾಡಿಗರಿಗೆ ಸಿಹಿಸುದ್ದಿ - ನಿಮ್ಮ ಒತ್ತುವರಿ ಜಮೀನಿಗೆ ಆಸ್ತಿ ಹಕ್ಕು ಪಡೆಯಿರಿ

#ಸ್ವಾಮಿತ್ವ ಕಾರ್ಡ್ #ಆಸ್ತಿಕಾರ್ಡ್ #ಹಕ್ಕುಪತ್ರ ಪಡೆಯಬಹುದು
ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ 2021 ರಲ್ಲಿ ಜಾರಿಗೊಳಿಸಿದ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ ರಚನೆಯಡಿ ನೀವು ವಾಸವಾಗಿರುವ ಮನೆ ಮತ್ತು ಜಾಗಕ್ಕೆ ಹಕ್ಕನ್ನು ಒದಗಿಸುವ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಆರಂಭಿಕವಾಗಿ 9 ರಾಜ್ಯಗಳಲ್ಲಿ ಆರಂಭವಾದ ಯೋಜನೆ ಇದೀಗ ದೇಶದಾದ್ಯಂತ ಜಾರಿಯಾಗುತ್ತಿದೆ. ಇದು ಮಲೆನಾಡಿನ ನೆಲವಾಸಿಗಳು ಮತ್ತು ಒತ್ತುವರಿದಾರರಿಗೆ ಅತಿದೊಡ್ಡ ನೆಮ್ಮದಿ ತಂದುಕೊಡಬಹುದಾದ ಯೋಜನೆಯಂತಿದೆ. ತಡಮಾಡದೆ ಎಲ್ಲ ಮಲೆ ವಾಸಿಗಳು ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದು ತೂದೂರು ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷ ಮಧುರಾಜ್ ಹೆಗ್ಡೆ ದಾಖಲೆಗಳನ್ನು ಹಂಚಿಕೊಂಡು ತಿಳಿಸಿದ್ದಾರೆ.

ಯೋಜನೆಯ ಪ್ರಮುಖ ಉದ್ದೇಶಗಳು
1. ಆಸ್ತಿ ಹಕ್ಕು ದಾಖಲೆ :- ಗ್ರಾಮೀಣ ಭಾಗದ ಜನರಿಗೆ (ಹಳ್ಳಿಗಳಲ್ಲಿನ ವಾಸದ ಮನೆ ಹಾಗೂ ಜಾಗಗಳಿಗೆ) ಕಾನೂನುಬದ್ಧವಾದ ಆಸ್ತಿ ಹಕ್ಕುಪತ್ರ ಅಥವಾ 'ಸ್ವಾಮಿತ್ವ ಕಾರ್ಡ್' ಒದಗಿಸುವುದು.

 2. ಬ್ಯಾಂಕ್ ಸಾಲ ಸೌಲಭ್ಯ :- ಗ್ರಾಮೀಣ ಜನತೆ ತಮ್ಮ ಆಸ್ತಿಗೆ ಅಧಿಕೃತ ದಾಖಲೆಯನ್ನು ಹೊಂದಿರುವುದರಿಂದ, ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಹಾಗೂ ಇತರೆ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುವುದು.

3. ವಿವಾದಗಳ ಇತ್ಯರ್ಥ :- ಹಳ್ಳಿಗಳಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ಗಡಿ ಹಾಗೂ ಒತ್ತುವರಿ ವಿವಾದಗಳನ್ನು ಶಾಶ್ವತವಾಗಿ ತಡೆಯುವುದು ಮತ್ತು ಕಾನೂನು ಕಲಹಗಳನ್ನು ಕಡಿಮೆ ಮಾಡುವುದು.

4. ನಿಖರವಾದ ನಕ್ಷೆ ತಯಾರಿಕೆ :- ಡ್ರೋನ್ ತಂತ್ರಜ್ಞಾನ ಮತ್ತು ಜಿಐಎಸ್ ಮ್ಯಾಪಿಂಗ್ ಬಳಸಿ ಗ್ರಾಮೀಣ ಆಸ್ತಿಗಳ ನಿಖರವಾದ ಡಿಜಿಟಲ್ ನಕ್ಷೆ ತಯಾರಿಸುವುದು.

5. ಗ್ರಾಮ ಪಂಚಾಯಿತಿಗೆ ಆದಾಯ :- ಆಸ್ತಿಗಳ ಮೌಲ್ಯಮಾಪನ ಮತ್ತು ತೆರಿಗೆ ನಿರ್ಣಯದ ಮೂಲಕ ಗ್ರಾಮ ಪಂಚಾಯಿತಿಗೆ ನೇರವಾಗಿ ಆದಾಯ ಸಂಗ್ರಹಿಸಲು ಸಹಾಯ ಮಾಡುವುದು.

ಸ್ವಾಮಿತ್ವ ಕಾರ್ಯನಿರ್ವಹಣೆ ಹೇಗೆ ?
1. ಡ್ರೋನ್ ಸಮೀಕ್ಷೆ :- ಅತ್ಯಾಧುನಿಕ ಡ್ರೋನ್‌ ಬಳಸಿ ಗ್ರಾಮದ ಪ್ರತಿಯೊಂದು ವಸತಿ ಪ್ರದೇಶದ ಪ್ರತಿಯೊಬ್ಬರ ಆಸ್ತಿಯನ್ನು ಅಳತೆ ಮಾಡಲಾಗುತ್ತದೆ ಮತ್ತು ಡಿಜಿಟಲ್ ನಕ್ಷೆ ತಯಾರಿಸಲಾಗುತ್ತದೆ.

2. ಪರಿಶೀಲನೆ ಮತ್ತು ಆಕ್ಷೇಪಣೆ :- ಸಮೀಕ್ಷೆಯ ನಂತರ ಸಿದ್ಧಪಡಿಸಿದ ಕರಡು ನಕ್ಷೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರದರ್ಶಿಸಿ, ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಪರಿಹರಿಸಲಾಗುತ್ತದೆ.

3. ಸ್ವಾಮಿತ್ವ ಕಾರ್ಡ್ ವಿತರಣೆ :- ಅಂತಿಮಗೊಂಡ ಬಳಿಕ ಆಸ್ತಿ ಮಾಲೀಕರಿಗೆ ಅಧಿಕೃತವಾದ'ಆಸ್ತಿ ಕಾರ್ಡ್ (Property Card) ಅಥವಾ ಹಕ್ಕುಪತ್ರವನ್ನು ನೀಡಲಾಗುತ್ತದೆ.

ಈ ಯೋಜನೆಯು ಗ್ರಾಮೀಣ ಭಾರತವನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಆಸ್ತಿಗಳಿಗೆ ಸ್ಪಷ್ಟವಾದ ಮಾಲೀಕತ್ವದ ದಾಖಲೆ ಒದಗಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದು ಅರಣ್ಯ ಒತ್ತುವರಿಯನ್ನು‌ ಅಧಿಕೃತಗೊಳಿಸುವುದಿಲ್ಲ. ಜನವಸತಿ ಪ್ರದೇಶದಲ್ಲಿ ಆಗಿರುವ ಒತ್ತುವರಿಯನ್ನು ಮಾತ್ರ ಕಾನೂನುಬದ್ಧಗೊಳಿಸಲಿದೆ. ಅಂದರೆ ಹೆಚ್ಚು ಮನೆಗಳಿದ್ದು ಅಲ್ಲಿ ಭೂಮಿಯ ಸಮಸ್ಯೆಗಳು ಇದ್ದಲ್ಲಿ ಬಗೆಹರಿಸುವ ಉದ್ದೇಶವನ್ನು ಹೊಂದಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post