ಅಯೋಧ್ಯೆಯ ರಾಮಮಂದಿರದ ಅವ್ಯವಹಾರಗಳನ್ನು ಸಾರ್ವಜನಿಕರಿಂದ ಮರೆಮಾಚಲು ಮರೆಮಾಚಲು ಸನ್ಮಾನ್ಯ ಶಾಸಕರು ಕಾಂಗ್ರೆಸ್‌ನ ಮೇಲೆ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ
ತೀರ್ಥಹಳ್ಳಿ ಕ್ಷೇತ್ರದ
ಬಿಜೆಪಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರು ತಮ್ಮ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ 2025 ರ ಶ್ರೀ
ರಾಮೇಶ್ವರ ಜಾತ್ರಾ ಸಮಿತಿಯ ಸಂಚಾಲಕರಾದ ನನ್ನ ಹೆಸರನ್ನು ವಿನಾಕಾರಣ ಎಳೆದು ತಂದು ಕಾಂಗ್ರೆಸ್ ಗುತ್ತಿಗೆದಾರರೊಬ್ಬರಿಗೆ
ಹಣ ಮಂಜೂರು ಮಾಡಿಸಲು ನಾನು ಓಡಾಟ ನಡೆಸಿದ್ದೆ ಎಂದು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಇದರಿಂದ
ನನಗೆ ಬಹಳ ಬೇಸರವಾಗಿದೆ.
ಕಳೆದ 2 ವರ್ಷಗಳಿಂದ
ಕೇವಲ ನಾನು ಮಾತ್ರವಲ್ಲದೇ ಬಿಜೆಪಿಯ ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರರವರು ಸಹ ಜಾತ್ರಾ ಸಮಿತಿಯ ಸಂಚಾಲಕರಾಗಿದ್ದರು.
ನಾನು ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಸಾರ್ವಜನಿಕರು ನೀಡಿದ ದೇಣಿಗೆ
ಹಣದಲ್ಲಿ ಒಂದು ಲೋಟ ಚಹಾವನ್ನು ಕುಡಿದಿಲ್ಲ ಎಂದು ಪ್ರಮಾಣ ಮಾಡುತ್ತೇನೆ.
ಶ್ರೀ ರಾಮೇಶ್ವರ
ದೇವಸ್ಥಾನದ ಸುತ್ತಮುತ್ತ ರಾತ್ರಿವೇಳೆಯಲ್ಲಿ ಕತ್ತಲು ಕವಿದ ವಾತಾವರಣ ಇದ್ದುದ್ದರಿಂದ ಅನೈತಿಕ ಚಟುವಟಿಕೆ
ಹಾಗೂ ಕಳ್ಳತನಕ್ಕೆ ಅವಕಾಶ ಆಗುತ್ತಿದೆ ಎಂಬ ದೂರುಗಳು ಭಕ್ತಾದಿಗಳಿಂದ ಬಂದ ಹಿನ್ನೆಲೆಯಲ್ಲಿ, ದೇವಸ್ಥಾನದ
ಸುತ್ತ ಹೈಮಾಸ್ಕ್‌ದೀಪಗಳು ಇದ್ದರೆ ಉತ್ತಮ ಎಂಬ ಕಾರಣಕ್ಕಾಗಿ ನಾನು ಮತ್ತು ಸೊಪ್ಪುಗುಡ್ಡೆ ರಾಘವೇಂದ್ರ
ಇಬ್ಬರೂ ಸಹಿ ಮಾಡಿ ಮುಜರಾಯಿ ಇಲಾಖೆಗೆ ಮನವಿ ಪತ್ರವನ್ನು ನೀಡಿದ್ದೇವೆ. ಈ ಸಮಯದಲ್ಲಿ ದೇವಸ್ಥಾನದ
ವ್ಯವಸ್ಥಾಪನ ಸಮಿತಿ ಇನ್ನೂ ರಚನೆಯಾಗಿರಲಿಲ್ಲ. ಮಾನ್ಯ ಶಾಸಕರ ಗಮನಕ್ಕೆ ಈ ಮನವಿ ಪತ್ರ ಲಗತ್ತಿಸಿದ್ದೇನೆ.
ವಿದ್ಯುತ್ ದೀಪಗಳ ವ್ಯವಸ್ಥೆಗಾಗಿ ನಾನು ಪ್ರಯತ್ನ ಪಟ್ಟಿರುವುದು ಸತ್ಯ. ಇದು ತಪ್ಪೇ?. ಇದಕ್ಕೆ ಸಂಬಂಧಪಟ್ಟ
ಗುತ್ತಿಗೆದಾರರ ಬಿಲ್ ಮಾಡಿಸಲು ಯಾವುದೇ ಪ್ರಯತ್ನಪಟ್ಟಿಲ್ಲ. ಅಲ್ಲದೇ ಇಲ್ಲಿಯವರೆಗೂ ಕಾಮಗಾರಿ ಬಿಲ್
ಪಾವತಿಯಾಗಿಲ್ಲ.
ವಿದ್ಯುತ್ ದೀಪದ ಜೊತೆಗೆ ಛತ್ರಕೇರಿಯಿಂದ ಚಕ್ರತೀರ್ಥದ ಮೂಲಕ ರಾಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಅರಳಿಮರದವರೆಗೆ ಸಂಚಾಲಕರ ಮನವಿಯ ಮೇರೆಗೆ ಪುರಸಭೆಯ ಅಧ್ಯಕ್ಷರಾಗಿದ್ದ ರಹಮತುಲ್ಲಾ ಅಸಾದಿ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ರಸ್ತೆಯನ್ನು ಸಹ ನಿರ್ಮಿಸಲಾಗಿದೆ. ನಾನು ಕಾಂಗ್ರೆಸಿಗ ಎಂಬ ಕಾರಣಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡುವುದು ಮಾಜಿ ಗೃಹ ಮಂತ್ರಿಗಳೂ ಹಾಲಿ ಶಾಸಕರ ಘನತೆಗೆ ಶೋಭೆ ತರುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಶ್ರೀ ರಾಮೇಶ್ವರನ ಎದುರು ಪ್ರಮಾಣ ಮಾಡಲು ಸಿದ್ದನಿದ್ದೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ಮಾನ್ಯ ಶಾಸಕರು ತಮ್ಮ ಹೇಳಿಕೆ ಸತ್ಯವೆಂದು ಶ್ರೀ ರಾಮೇಶ್ವರನ ಮುಂದೆ ಪ್ರಮಾಣ ಮಾಡಲಿ. (ಟಿ.ಎಲ್. ಸುಂದರೇಶ್ ಹೇಳಿಕೆಯನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.)
