ಖ್ಯಾತ ಇಎನ್‌ಟಿ ಸರ್ಜನ್ ಡಾ.ಪುರುಷೋತ್ತಮ ನಂಬಳ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪುರುಷೋತ್ತಮ ಅವರು ಪತ್ನಿ ಗೀತಾ , ಪುತ್ರ ಅಪೊಲೊ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿರುವ ಡಾ. ಸಾತ್ಯಿಕಿ ನಂಬಳ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಡಾ. ಪುರುಷೋತ್ತಮ ತೀರ್ಥಹಳ್ಳಿಯ ಅತ್ಯಂತ ಪ್ರತಿಷ್ಟಿತ ಹಾಗೂ ಪ್ರಸಿದ್ಧ ನಂಬಳ ಕುಟುಂಬದವರು. ರಾಜ್ಯದ ಮೇರು ನ್ಯಾಯಧೀಶರಲ್ಲಿ ಒಬ್ಬರಾಗಿದ್ದ ಎನ್.ಡಿ.ವೆಂಕಟೇಶ್ ಹಾಗೂ ದೇಶದ ಹೆಸರಾಂತ ರೈತ ಹೋರಾಟಗಾರ ಮತ್ತು ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದ ಎನ್.ಡಿ.ಸುಂದರೇಶ್ ಅವರ ಸಹೋದರರು.
