ಪಿಕಪ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯ
ಸಕ್ರೆಬೈಲು ಸಮೀಪ
ಸಹ್ಯಾದ್ರಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿಯಿಂದ ಶಿವಮೊಗ್ಗದ
ಕಡೆಗೆ ಬಸ್ ಚಲಿಸುತ್ತಿತ್ತು. ಶಿವಮೊಗ್ಗದ ಕಡೆಯಿಂದ ಪಿಕಪ್ ವಾಹನ ಹೆಬ್ರಿಗೆ ತೆರಳುತ್ತಿತ್ತು.
ಮಾರ್ಗ ಮಧ್ಯೆಯ ಸಕ್ರೆಬೈಲು ಸಮೀಪ ಅಪಘಾತ ಸಂಭವಿಸಿದ್ದು ಪಿಕಪ್ ಮುಂಭಾಗ ಪೂರ್ಣ ಜಖಂಗೊಂಡಿದೆ. ಪಿಕಪ್‌ನಲ್ಲಿ
ಇದ್ದ ಹೆಬ್ರಿ ಮೂಲದ ಶಬರೀಶ ಮತ್ತು ಚಂದ್ರಪ್ಪ ಇಬ್ಬರು ಅಪಘಾತದಿಂದ ಸಿಲುಕಿಕೊಂಡಿದ್ದು ಸ್ಥಳೀಯರು
ಮತ್ತು ಪೊಲೀಸರ ಸಹಾಯದಿಂದ ಇಬ್ಬರನ್ನು ಹೊರಗೆಳೆಯಲಾಗಿದೆ. ಇಬ್ಬರ ಕಾಲಿಗೆ ಗಂಭೀರವಾಗಿ ಗಾಯವಾಗಿದೆ
ಎಂಬ ಮಾಹಿತಿ ಲಭ್ಯವಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ಮತ್ತು
ಸಿಬ್ಬಂದಿಗಳ ಸಹಾಯದಿಂದ ಗಾಯಗಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
