8 ವಿದ್ಯಾರ್ಥಿಗಳಿಗೆ
ತರಬೇತಿ ನೀಡಿದ ಸುಬ್ರಮಣ್ಯ ಕೊಡಗಿ
ಪ್ರತಿ ವರ್ಷ
250 ಸೈನಿಕರಿಗೆ ತರಬೇತಿ ನೀಡಲು ಸಿದ್ಧತೆ
ಭಾರತೀಯ ಸೇನೆಗೆ
ಸೇರಬೇಕೆಂಬ ಹಂಬಲ ಹೊಂದಿದ್ದ ಯುವಕ ಸುಬ್ರಮಣ್ಯ ಕೊಡಗಿ ಇದೀಗ ʼಮಲ್ನಾಡ್
ಕೆರಿಯರ್ ಅಕಾಡೆಮಿʼ ಸೈನಿಕ ತರಬೇತಿ ಶಾಲೆಯೊಂದನ್ನು ತೆರೆದು ಗಮನ ಸೆಳೆಯುತ್ತಿದ್ದಾರೆ.
ಕೌಟುಂಬಿಕ ಸಮಸ್ಯೆಯ ಕಾರಣದಿಂದ ಸೈನಿಕನಾಗುವ ಅವಕಾಶ ಕಳೆದುಕೊಂಡ ಸುಬ್ರಮಣ್ಯ ಕೆ.ಆರ್. ಅನೇಕ ಯುವಕರನ್ನು
ಸೈನ್ಯಕ್ಕಾಗಿ ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ.
ಎರಡು ವರ್ಷಗಳ ಹಿಂದೆ
ಚಿಕ್ಕದಾಗಿ ಹುಟ್ಟಿಕೊಂಡ ಕನಸಿನ ಪ್ರತಿಫಲವಾಗಿ ಅಂದೇ ವರ್ಷ 4 ವಿದ್ಯಾರ್ಥಿಗಳು ಸೈನಿಕರಾದರು. ಇಷ್ಟಕ್ಕೆ
ಇದನ್ನು ಬಿಡಬಾರದು ಇನ್ನಷ್ಟು ಯುವಕರು ಭಾರತೀಯ ಸೈನ್ಯಕ್ಕೆ ಸೇರಬೇಕೆಂಬ ಉತ್ಸಾಹದಿಂದ ಕಳೆದ ಒಂದು
ವರ್ಷದ ಹಿಂದೆ ಮಲ್ನಾಡ್ ಕೆರಿಯರ್ ಅಕಾಡೆಮಿ (ಎಂಸಿಎ) ಹುಟ್ಟಿಕೊಂಡಿದೆ. ಅದಾಗುತ್ತಿದ್ದಂತೆ ಪ್ರಸ್ತುತ
ಸಾಲಿನಲ್ಲಿ 4 ವಿದ್ಯಾರ್ಥಿಗಳು ಮತ್ತೆ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ.
ಕೈಮರ-ಹೊಸಳ್ಳಿ
ಪ್ರಜ್ವಲ್ ಹೆಚ್.ಆರ್., ಜಿಗಳಗೋಡು ಸಾತ್ವಿಕ್ ಎಸ್, ಹೆಗ್ಗಾರು ಆದಿತ್ಯ ಹೆಚ್.ಎಸ್., ಹೆಗ್ಗಾರು
ಪ್ರಜ್ವಲ್ ಹೆಚ್.ಡಿ. ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳು. ಈ ಸಾಲಿನಲ್ಲಿ ಇದೀಗ 27 ವಿದ್ಯಾರ್ಥಿಗಳು
ಸೈನ್ಯಕ್ಕೆ ಸೇರಲು ಸಜ್ಜಾಗುತ್ತಿದ್ದು ತರಬೇತಿ ಪಡೆಯುತ್ತಿದ್ದಾರೆ. ಸುಬ್ರಮಣ್ಯ ಕೆ.ಆರ್. ತೀರ್ಥಹಳ್ಳಿ
ತಾಲ್ಲೂಕನ್ನು ಸೈನಿಕ ತಾಲ್ಲೂಕು ಎಂದು ಗುರುತಿಸಿಕೊಳ್ಳಬೇಕು. ದೇಶ ಕಾಯುವ ಕಾಯಕದಲ್ಲಿ ಮಲೆನಾಡಿಗರ
ಸಂಖ್ಯೆ ಹೆಚ್ಚಾಗಬೇಕೆಂಬ ಮಹತ್ವಕಾಂಕ್ಷೆಯಿಂದ ತರಬೇತಿ ನೀಡುತ್ತಿದ್ದಾರೆ. ಪ್ರತಿ ವರ್ಷ 250 ಸೈನಿಕರನ್ನು
ಸಜ್ಜಗೊಳಿಸಬೇಕೆಂಬ ಆಸೆ ಹೊಂದಿದ್ದಾರೆ.
ಪರೀಕ್ಷೆಯ ಜೊತೆಗೆ
ಕಠಿಣವಾದ ದೈಹಿಕ ಪರಿಶ್ರಮ ಹೆಚ್ಚಿಸಿಕೊಳ್ಳಲು ತರಬೇತಿ ನೀಡುತ್ತಿರುವ ಸುಬ್ರಮಣ್ಯ ವಿದ್ಯಾರ್ಥಿಗಳ
ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ. ಅವರ ಕನಸು ಯಶಸ್ವಿಯಾಗಲಿ. ಭಾರತೀಯ ಸೇನೆಯಲ್ಲಿ ತೀರ್ಥಹಳ್ಳಿಯ
ಪಾತ್ರ ಹಿರಿದಾಗಲಿ ಎಂದು ನೆಲದಧ್ವನಿ ಬಳಗ ಹಾರೈಸುತ್ತದೆ.
