ವಿಧಾನ ಪರಿಷತ್ ಸ್ಥಾನಕ್ಕೆ‌ ಕಾಂಗೈನ 5ನೇ ಅಭ್ಯರ್ಥಿ ಘೋಷಣೆ

ತೀರ್ಥಹಳ್ಳಿಯ ಅಳಿಯ ವಿನಯ್‌ ಕಾರ್ತಿಕ್‌ ಕಣಕ್ಕೆ
ಆಪ್ತನನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿದ ಸಿಎಂ ಡಿ.ಕೆ.ಶಿವಕುಮಾರ್‌

ಜೂನ್‌ 18 ರಂದು ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿಗಳಾಗಿ ಬಿ.ಕೆ.ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್‌ ಹಾಗೂ ಮಳವಳ್ಳಿ ಶಿವಣ್ಣ ಸೇರಿದಂತೆ ಕಾಂಗ್ರೆಸ್‌ ಕಳೆದ ಬುಧವಾರ ನಾಲ್ವರು ಅಭ್ಯರ್ಥಿಗಳ ಹೆಸರು ಘೋಷಿಸಿತ್ತು.

ಶುಕ್ರವಾರ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಆಪ್ತ ವಿನಯ್ ಕಾರ್ತಿಕ್ ಹೆಸರು ಘೋಷಿಸುವ ಮೂಲಕ ಮೇಲ್ಮನೆಗೆ ಕಾಂಗ್ರೆಸ್ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿಧಾನಸಭೆಯಲ್ಲಿ 136 ಶಾಸಕರ ಬಲ ಹೊಂದಿರುವ ಕಾಂಗ್ರೆಸ್‌ 4 ಸ್ಥಾನ ಗೆಲ್ಲಬಹುದು. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಕೂಟದಿಂದ ಸುಲಭವಾಗಿ ಇಬ್ಬರು ಅಭ್ಯರ್ಥಿಗಳು ಗೆಲ್ಲಬಹುದು.

ಕಾಂಗೈನ ಹಲವಾರು ಆಕಾಂಕ್ಷಿಗಳ ನಡುವೆ ಶಿವಕುಮಾರ್ ಅವರ ನೆಚ್ಚಿನ ಅಭ್ಯರ್ಥಿಯಾಗಿ ವಿನಯ್ ಕಣಕ್ಕೆ ಇಳಿಸಿರುವ ಕಾರಣ ಗೆಲುವು ಸ್ವತ ಶಿವಕುಮಾರ್ ಅವರಿಗೂ ಪ್ರತಿಷ್ಠೆ ಪ್ರಶ್ನೆ ಆಗಲಿದೆ. ಪ್ರತಿಯೊಬ್ಬ ಪರಿಷತ್‌ ಸದಸ್ಯರ ಗೆಲುವಿಗೆ ತಲಾ 32 ಮತಗಳು ಅಗತ್ಯವಿದೆ. ಬಿಜೆಪಿ ಹಾಗೂ ಜೆಡಿಎಸ್ ಮತಗಳನ್ನು ಸೆಳೆದುಕೊಂಡರೆ ವಿನಯ ಕಾರ್ತಿಕ್‌ ಗೆಲುವಿನ ಮೆಟ್ಟಿಲೇರಬಹುದು.

ಯಾರು ವಿನಯ್‌ ಕಾರ್ತಿಕ್

ಸಿಎಂ ಡಿ.ಕೆ.ಶಿವಕುಮಾರ್‌ಗೆ ಅತ್ಯಂತ ಆಪ್ತರಾಗಿರುವ ವಿನಯ್‌ ಕಾರ್ತಿಕ್‌ ಕುಟುಂಬ ಭಾರತದ ಮೊಟ್ಟ ಮೊದಲ ಪ್ರಧಾನಿ ನೆಹರುರವರ ಕಾಲದಿಂದಲೂ ಕಟ್ಟಾ ಕಾಂಗ್ರೆಸ್‌ ಕುಟುಂಬ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.

ಸ್ವಾತಂತ್ರ್ಯ‌ ಸೇನಾನಿ ದೇವಂಗಿ ಮಾನಪ್ಪ ಅವರ ಪುತ್ರ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದದ ಖಜಾಂಚಿ ದೇವಂಗಿ ಮನುದೇವ್, ಪರಿಣಿತ ದಂಪತಿಯ ಪುತ್ರಿ ತೇಜಸ್ವಿನಿ ಅವರನ್ನು ವಿನಯ್‌ ಕಾರ್ತಿಕ್‌ ವರಿಸಿದ್ದಾರೆ. ಹಾಗಾಗಿ ಇವರು ತೀರ್ಥಹಳ್ಳಿಯ ಅಳಿಯ.

ವಿನಯ್‌ ಕಾರ್ತಿಕ್‌ ಮೈಸೂರಿನ ಸಾಹುಕಾರ್‌ ಚನ್ನಯ್ಯ, ಹಾಗೂ ದೊಡ್ಡಬಳ್ಳಾಪುರದ ಕೆ.ಹೆಚ್. ರಾಮಯ್ಯ ಅವರ ಮೊಮ್ಮಗ.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಕಿಂಗ್‌ ಮೇಕರ್‌ ಸಾಹುಕಾರ್‌ ಚನ್ನಯ್ಯ, ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯಂತಹ ರಾಷ್ಟ್ರೀಯ ನಾಯಕರ ನಿಕಟವರ್ತಿಯಾಗಿದ್ದರು. ಮೈಸೂರಿನ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದತ್ತ ದೇಶ ಸಾಗುತ್ತಿದ್ದ ಸಂಕ್ರಮಣ ಕಾಲದಲ್ಲಿ ಇವರ ರಾಜಕೀಯ ತಂತ್ರಗಾರಿಕೆ ನಿರ್ಣಾಯಕವಾಗಿತ್ತು.

ಕೆ.ಹೆಚ್. ರಾಮಯ್ಯ (ಕೆ.ಹನುಮಯ್ಯ) ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸಮಾಜ ಸುಧಾರಕರು ಮತ್ತು ಚಿಂತಕರಾಗಿದ್ದರು. ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲಿ ರಾಮಯ್ಯ ಒಬ್ಬರಾಗಿದ್ದು, ಆದಿಚುಂಚನಗಿರಿ ಮಠದ ಸ್ಥಾಪನೆಗೂ ಕಾರಣೀಭೂತರಾಗಿದ್ದರು. ಇವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post