ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಜಗತ್ತಿನ ಸರ್ವಮಾನ್ಯ ರಾಷ್ಟ್ರವಾಗಿದೆ

ಭಾರತದಾದ್ಯಂತ ಸಂಮೃದ್ಧಿ ತುಂಬಿ ತುಳುಕುವಂತಾಗಿದೆ
ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ

ನರೇಂದ್ರ ಮೋದಿ ಭಾರತ ಕಂಡ ಅದ್ವಿತೀಯ ಪ್ರಧಾನಿ. ಅವರು ಪ್ರಧಾನಿಯಾದ ಬಳಿಕ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಒಂದು ಕಾಲದಲ್ಲಿ ಭಾರತ ಹಾಗೂ ಭಾರತದ ಪ್ರಧಾನಿ ಎಂದರೆ ನಗಣ್ಯವಾಗಿ ನೋಡುತ್ತಿದ್ದ ಕಾಲವಿತ್ತು. ಅದನ್ನೆಲ್ಲ ಹೋಗಲಾಡಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ಕಂಡರೆ ಆಧರಿಸುವ ಮಟ್ಟಕ್ಕೆ ದೇಶವನ್ನು ನರೇಂದ್ರ ಮೋದಿ ಮುನ್ನಡೆಸಿದ್ದಾರೆ ಎಂದು ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಗುಣಗಾನ ಮಾಡಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿಯಾಗಿ 4399 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ತೀರ್ಥಹಳ್ಳಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಬಡವರ ರೈತರ ಮಧ್ಯಮ ವರ್ಗದವರ ಆರ್ಥಿಕ ಬಲ ಹೆಚ್ಚಿ ಸಂಮೃದ್ಧಿ ತುಂಬಿ ತುಳುಕುವಂತಾಗಿದೆ. ಅವರು ಪ್ರಧಾನಿಯಾದ ಬಳಿಕ 90ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ದೇಶದ ಆರ್ಥಿಕತೆ ಪ್ರಪಂಚದಲ್ಲಿಯೇ 4ನೇ ಸ್ಥಾನಕ್ಕೇರಿದೆ. 2014ರಲ್ಲಿ 1.70 ಲಕ್ಷ ಟ್ರಿಲಿಯನ್‌ ಇದ್ದ ಜಿಡಿಪಿ ಈಗ 4.25ಕ್ಕೆ ಏರಿದೆ. ನಿರುದ್ಯೋಗ 2014ರಲ್ಲಿ 6.0% ಇದ್ದಿದ್ದು ಈಗ 3.0% ಏರಿಕೆಯಾಗಿದೆ. 2014ರಲ್ಲಿ 250 ಕಿ.ಮೀ ಇದ್ದ ಮೆಟ್ರೋ ಈಗ ಒಂದು ಸಾವಿರ ಕಿ.ಮೀ.ಗೆ ಏರಿದೆ. 91 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಈಗ 1.50 ಲಕ್ಷ ಕಿ.ಮೀಗೆ ಏರಿದೆ. 370 ಮೆಡಿಕಲ್‌ ಕಾಲೇಜುಗಳನ್ನು ಈಗ 800ಕ್ಕೆ ಕೊಂಡೊಯ್ಯಲಾಗಿದೆ. ಎಮ್ಸ್‌ಗಳನ್ನು 7 ರಿಂದ 20ಕ್ಕೆ ಏರಿಸಲಾಗಿದೆ. ನಲ್ಲಿ ಸಂಪರ್ಕ 3 ಕೋಟಿಯಿಂದ 15 ಕೋಟಿಗೆ ಏರಿದೆ. 2014ರಲ್ಲಿ 93 ಕಿ.ಮೀ. ಆಗುತ್ತಿದ್ದ ಎಕ್ಸ್ಪ್ರೆಸ್‌ ವೇ ಈಗ 5000 ಕಿ.ಮೀ. ಏರಿದೆ. 2 ಲಕ್ಷ ಕೋಟಿ ರೂಪಾಯಿ ಇದ್ದ ಅಭಿವೃದ್ಧಿ ಬಜೆಟ್‌ 12 ಲಕ್ಷ ಕೋಟಿ ರೂಪಾಯಿಗೆ ಏರಿದೆ. ದೇಶದ ಭದ್ರತೆಗಾಗಿ ರಕ್ಷಣಾ ಬಜೆಟ್‌ 2 ಲಕ್ಷ ಕೋಟಿ ರೂಪಾಯಿಯಿಂದ 7 ಲಕ್ಷ ಕೋಟಿ ರೂಪಾಯಿಗೆ ಏರಿಸಲಾಗಿದೆ. ತಲಾ ಆದಾಯ 89 ಸಾವಿರದಿಂದ 2.70 ಲಕ್ಷಕ್ಕೇರಿದೆ. ರಕ್ಷಣಾ ರಪ್ತು 2 ಕೋಟಿಯಿಂದ 23 ಸಾವಿರ ಕೋಟಿಗೆ ಏರಿದೆ. ಇದೊಂದು ಅದ್ಭುತ ಸಾಧನೆಯಾಗಿದ್ದು ಈ ಎಲ್ಲಾ ಕಾರಣದಿಂದ ಭಾರತ ಈಗ ಮೋದಿಯವರ ನಾಯಕತ್ವದಲ್ಲಿ ಜಗತ್ತಿನ ಸರ್ವಮಾನ್ಯ ರಾಷ್ಟ್ರವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯ ಬಿಜೆಪಿ ಮುಖಂಡರಾದ ಅಶೋಕಮೂರ್ತಿ, ನಾಗರಾಜ ಶೆಟ್ಟಿ, ಸಿ.ಬಿ. ಈಶ್ವರ್, ಜಿಲ್ಲಾ ಉಪಾಧ್ಯಕ್ಷ ಚಂದವಳ್ಳಿ ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಹೆದ್ದೂರು ನವೀನ್, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ, ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ಮುಖಂಡರಾದ ಸಂದೇಶ ಜವಳಿ, ಮಂಗಳಗೋಪಿ, ಕುರುವಳ್ಳಿ ಪ್ರಮೋದ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post