ಬಾಳೆಕೊಪ್ಪ, ಕಡೇಮನೆ ಭಾಗದಲ್ಲಿ ಅಕ್ರಮ ಮರಳು ದಾಸ್ತಾನು ವಶಕ್ಕೆ
ತೀರ್ಥಹಳ್ಳಿಯಲ್ಲಿ ವಿವಿಧ ಭಾಗದಲ್ಲಿ ರೈಡ್
ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಕಡೆಗಳಲ್ಲಿ ಕಂದಾಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮದ ಕುರಿತು ಮರಳು ಕಾರ್ಯಪಡೆ ಪುಲ್ ರೈಡ್ ಆರಂಭಿಸಿದ್ದು ವಿವಿಧ ಕಡೆಗಳ ಮರಳು ದಾಸ್ತಾನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳ, ಹೊಳೆ, ನದಿಗಳಿಂದ ಪಿಕಪ್, ಟಿಪ್ಪರ್, ಲಾರಿಗಳಲ್ಲಿ ಮನೆಗಳಿಗೆ ಅಕ್ರಮವಾಗಿ ಮರಳು ಸಾಗಿಸಿದ ಲಾರಿ ಹಾಗೂ ಮಾಲೀಕರನ್ನು ಪತ್ತೆ ಹಚ್ಚುವ ಮೂಲಕ ದೊಡ್ಡ ಮೊತ್ತದ ದಂಡ ಹಾಕುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮರಳಿನ ಅಕ್ರಮದ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮ ಜರುಗಿಸುವುದಕ್ಕೆ ಮುಂದಾಗಿದ್ದಾರೆ. ಕಂದಾಯ, ಗಣಿ ಇಲಾಖೆ ಮುಳುಬಾಗಿಲು ಗ್ರಾ.ಪಂ. ವ್ಯಾಪ್ತಿಯ ಕಡೇಮನೆ, ಬಾಳೆಕೊಪ್ಪ ಸೇತುವೆ ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳಿಗೆ ಕಂದಾಯ ನಿರೀಕ್ಷಕ ಸುಧೀರ್, ಭೂ ವಿಜ್ಞಾನಿ ಪ್ರವೀಣ್ ಕುಮಾರ್ ಜಂಟಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ.