ಒಬಿಸಿ ಮೋರ್ಚಾ ವತಿಯಿಂದ ಮಾಜಿ ಯೋಧ ಸುರೇಶ ಹೆಚ್.ಡಿ. ಅವರಿಗೆ ಗೌರವ

ತೀರ್ಥಹಳ್ಳಿ ತಾಲೂಕು ಒಬಿಸಿ ಮೋರ್ಚಾ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಾಜಿ ಸೈನಿಕರಾದ ಸುರೇಶ ಹೆಚ್,ಡಿ. ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಸುರೇಶ್ ಕೋಣಂದೂರು ಹುಲ್ಲತ್ತಿಯ ವಾಸಿ  ದುಗ್ಗಪ್ಪಗೌಡ ಜಯಮ್ಮದಂಪತಿ ಪುತ್ರ. ಕೋಣಂದೂರಿನ ಪ್ರಾಥಮಿಕ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, 1992 ರಲ್ಲಿ CISF ರಾಜಸ್ಥಾನ ದೇವಲಿಯಲ್ಲಿ ಪ್ಯಾರಮಿಲಿಟರಿಯ ಟ್ರೈನಿಂಗ್ ಪಡೆದು SDSE ಇಸ್ರೋ ಸೇವೆಸಲ್ಲಿಸಿ ತದನಂತರ MCF ಹಾಸನದಲ್ಲಿ ಪುನಃ ತರಬೇತಿ ಪಡೆದು, ವೆಸ್ಟ್ ಬೆಂಗಾಲ್ ನಲ್ಲಿ 10ವರ್ಷ ಹಾಗೂ ದೆಹಲಿಯಲ್ಲಿ 5 ವರ್ಷ  ಒಟ್ಟಾರೆ 20 ವರ್ಷಗಳು ಸೈನ್ಯದಲ್ಲಿ  ಸೇವೆಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಈಗ ಪತ್ನಿ  ಸುರೇಖ ಹಾಗೂ ಮಕ್ಕಳಾದ ಶಾಂತ್ ಭಾರ್ಗವ ಹಾಗೂ ಸಾಯಿ ಶರಣ್ಯ ಜೊತೆಗೆ  ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ.

ಈ ಬಾರಿ  80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಒಬಿಸಿ ಮೋರ್ಚಾ ಇವರನ್ನು ಗುರುತಿಸಿ ಗೌರವಿಸಿದ ಸಂದರ್ಭದಲ್ಲಿ ಅವರ ಸೈನಿಕ ಜೀವನ ಸಾಗಿಬಂದ ರೀತಿ ದೇಶಕ್ಕೆ ತಮ್ಮ ಸೇವೆಯನ್ನು ಸ್ಮರಿಸುತ್ತಾ, ಇಂದಿನ ಯುವಶಕ್ತಿ  ಕಾಯ ವಾಚ ಮನಸ ದೇಶಸೇವೆ ಮಾಡಬೇಕು ದೇಶಕ್ಕೆ ಮಾರಕವಾಗದೆ ದೇಶಪ್ರೇಮ ಬೆಳಸಿಕೊಳ್ಳಬೇಕು ಎಂದರು.

ಒಂದು ಗೌರವಾರ್ಪಣ ಕಾರ್ಯಕ್ರಮದಲ್ಲಿ ತಾಲೂಕು ಒಬಿಸಿ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಎನ್ ಆಚಾರ್ಯ, ಒಬಿಸಿ ಪ್ರಭಾರಿ ಅನಿಲ್ ಮಿಲ್ಕೆರಿ, ನಿಕಟಪೂರ್ವ ರೋಟರಿ ಮನೋಜ್ ಆಚಾರ್ಯ, ಒಬಿಸಿ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಪೂಜಾರಿ, ಅಧ್ಯಕ್ಷರು ದೇವಾಡಿಗ ಸಂಘ ಗಣೇಶ್ ದೇವಾಡಿಗ, ಚೇತನ್ ಪುರೋಹಿತ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅನನ್ಯ ಆಚಾರ್ಯ ಪ್ರಾರ್ಥಿಸಿದರು. ಅಣ್ಣು ಪೂಜಾರಿ ಸ್ವಾಗತಿಸಿ ರಾಘವೇಂದ್ರ ಎನ್. ಆಚಾರ್ಯ ಪ್ರಸ್ತಾಪಿಸಿದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post