ಸ್ಥಳೀಯವಾಗಿ ಯುವಕರಿಗೆ
ಉದ್ಯೋಗವಕಾಶ ಸಿಗಬೇಕು
ಪ್ರಾಮಾಣಿಕ ಭಾಷಣ;
ಯುವಜನತೆಯ ಧ್ವನಿಯಂತೆ ಕಂಡುಬಂದ ತಹಶೀಲ್ದಾರ್ ಎಸ್.ರಂಜಿತ್
ತೀರ್ಥಹಳ್ಳಿಯ ಪಟ್ಟಣ
ಪಂಚಾಯಿತಿ ಮೈದಾನದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ
80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಎಸ್.ರಂಜಿತ್ ಧ್ವಜ
ಸಂದೇಶ ವಿಶೇಷವಾಗಿ ಸ್ವಾತಂತ್ರೋತ್ಸವದ ಅಗತ್ಯ ಮತ್ತು ಪರಿಪೂರ್ಣತೆಯನ್ನು ಕೇಂದ್ರೀಕರಿಸಿತ್ತು. ಸ್ವಾತಂತ್ರ್ಯದ
ಯಶೋಗಾಥೆ, ನೆತ್ತರಿನ ಕಥೆ, ಅಸಂಖ್ಯಾತ ವೀರರ ಕನಸುಗಳನ್ನು ನೆನಪಿಸಿ ಅಜ್ಞಾನ, ಬಡತನ, ಅನ್ಯಾಯ, ಅಸ್ಪೃಶ್ಯತೆ
ತೊಲಗಿಸುವ ಗಟ್ಟಿಧ್ವನಿಯಾಗಿ ಮೊಳಗಿತು.
ಭಾಷಣದ ಉದ್ದಕ್ಕೂ
ತೀರ್ಥಹಳ್ಳಿ ತಾಲ್ಲೂಕಿನ ಗೌರವನ್ನು ಎತ್ತಿಹಿಡಿದ ಕುವೆಂಪು, ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರ
ಸಾಧನೆ, ಹೋರಾಟವನ್ನು ನೆನಪಿಸಿದರೆ ಮತ್ತೊಂದು ಕಡೆಯಲ್ಲಿ ತೀರ್ಥಹಳ್ಳಿಯನ್ನು ಮಾಡೆಲ್ ಹಳ್ಳಿಯಾಗಿ
ರೂಪಿಸುವ ಯೋಜನೆಗಳಿಗೆ ತುಡಿಯುವ ಯುವ ಸಮೂಹದ ನಿರೀಕ್ಷೆಯನ್ನು ಎತ್ತಿ ತೋರಿಸಿತು. ಇಲ್ಲಿನ ಹಳ್ಳಿ,
ಗ್ರಾಮಗಳ ಯುವಕರು ಕೆಲಸ ಅರಿಸಿ ಬೆಂಗಳೂರು ಸೇರಿದಂತೆ ಇತರೆ ನಗರಗಳನ್ನು ಆಶ್ರಯಿಸುತ್ತಿರುವ ಕುರಿತಂತೆ
ಪ್ರಸ್ತಾಪಿಸಿದ ಅವರು ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗವಕಾಶ ಕಲ್ಪಿಸುವ ಯೋಜನೆಗಳನ್ನು ಸ್ಥಾಪಿಸಬೇಕೆಂಬ
ತುಡಿತ ಅವರ ಮಾತಿನ ಸಾರದ ಉಲ್ಲೇಖ.
ಪ್ರತಿಯೊಬ್ಬರು ತಮ್ಮ
ಪಾತ್ರವನ್ನು ಸರಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿದರೆ ಭವ್ಯ ಭವಿಷ್ಯವನ್ನು ಸ್ವತಃ ತಮ್ಮ ಕೈಗಳಲ್ಲಿಯೇ
ಕಟ್ಟಬಹುದು. ಗಾಂಧಿ, ಬಸವಣ್ಣ, ಅಂಬೇಡ್ಕರ್ ತತ್ವ ಆದರ್ಶಗಳನ್ನು ಪಾಲಿಸಿ ಜಾಗತಿಕ ಗ್ರಾಮದ ಕನಸುಗಳನ್ನು
ಸಾಕಾರಗೊಳಿಸುವ ಎಲ್ಲಾ ಚಿಂತನೆಗಳನ್ನು ಸಂದೇಶ ಹೇಳುತ್ತಿತ್ತು. ಅದಕ್ಕಾಗಿ ದೇಶ ಕಟ್ಟುವ ಸಂಕಲ್ಪಕ್ಕೆ
ಸರ್ವರು ಪ್ರಯತ್ನಿಸಬೇಕು. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ನಾಗರೀಕರು ಒಗ್ಗಟ್ಟಿನ ಸೂತ್ರ
ಅನುಸರಿಸಬೇಕೆಂಬ ಕುತೂಹಲಕಾರಿ ಚಿಂತನಾಪೂರ್ಣ ಗುರಿಯನ್ನು ಎತ್ತಿಹಿಡಿಯುವ ಸಂದೇಶದಂತೆ ಕಾಣಿಸುತ್ತಿತ್ತು.
ಶಾಸಕ ಆರಗ ಜ್ಞಾನೇಂದ್ರ,
ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಇಓ ಶೈಲಾ, ವೃತ್ತ ನಿರೀಕ್ಷಕ ಇಮ್ರಾನ್ ಬೇಗ್ ಮುಂತಾದವರು
ಇದ್ದರು.