ಎಸ್ಎಸ್ಎಲ್ಸಿ ಸಿಬಿಎಸ್ಸಿಯಲ್ಲಿ 5ನೇ ರ‌್ಯಾಂಕ್ ಪಡೆದ ಅವನಿಶ್ ರಾವ್ ಪವಾರ್
ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿರುವ ತೀರ್ಥಹಳ್ಳಿ ರಂಜದಕಟ್ಟೆಯ ಅವನಿಶ್ ರಾವ್ ಪವಾರ್ 500ಕ್ಕೆ 475 ಅಂಕ ಪಡೆದು ರಾಜ್ಯಕ್ಕೆ 5 ನೇ ಸ್ಥಾನ ಪಡೆದ ಸಾಧನೆ ಮಾಡಿದ್ದಾನೆ.
ಹೆಬ್ರಿಯ ಅಮೃತ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಮೊದಲ ಸ್ಥಾನ ಪಡೆದಿರುವ ಈ ವಿದ್ಯಾರ್ಥಿ ತೀರ್ಥಹಳ್ಳಿ ಸೇವಾಭಾರತಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದು ವಿಶೇಷ.
ಈ ಪ್ರತಿಭಾವಂತ ಮೂಕಾಂಬಿಕಾ ಸ್ಟಿಕ್ಕರ್ ಮಾಲೀಕ ರಾಜೇಶ್ ಪವಾರ್ ಮತ್ತು ಶಶಿಕಲಾ ದಂಪತಿ ಮಗ.