ಮಾನವೀಯತೆ ಹಾಗೂ ಸಂಕಷ್ಟಕ್ಕೆ ಸ್ಪಂದಿಸಿದಕ್ಕೆ ನಮ್ಮಗಳಿಗಾದ ಮೋಸ ಹಾಗೂ ವಂಚನೆಯ ಪ್ರಕರಣ ವಿದು - ಅನುದೀಪ್ ಕುಶಾವತಿ
ನೂರು ಕೋಟಿ ವಂಚನೆ ಎಂಬ ಪ್ರಕರಣದ ವಿಚಾರವಾಗಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ದುರುದ್ದೇಶ ಪೂರಿತ ಹಾಗೂ ರಾಜಕೀಯ ಪ್ರೇರಿತ ಆರೋಪ
ನನ್ನ ಹೆಂಡತಿಯ ಸಹೋದರಿಯಾದ ಶ್ರೀಮತಿ ಯಶೋಧ ರಾಜ್ ರವರು ತೀರ್ಥಹಳ್ಳಿಯ ಅರಳಿಸರ ಮೂಲದ ಬೆಂಗಳೂರು ನಿವಾಸಿಯಾಗಿದ್ದು ರೇ ಎಜುಕೇಶನ್ ಟ್ರಸ್ಟ್ ಒಂದನ್ನು ರಚಿಸಿಕೊಂಡು ಕಾಲೇಜನ್ನು ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆರ್ಥಿಕ ದುಸ್ಥಿತಿಯಲ್ಲಿರುವ ಆ ಸಂಸ್ಥೆಗೆ ನಾನು ಅನೇಕ ಬಾರಿ ಆರ್ಥಿಕ ಸಹಾಯ ಮಾಡಿರುತ್ತೇನೆ. ಈ ವಿಚಾರವಾಗಿ ಸಂಸ್ಥೆಗೆ ದೇಣಿಗೆ ನೀಡುವವರಿದ್ದರೆ ತಿಳಿಸುವಂತೆ ಯಶೋಧರವರು ನನ್ನಲ್ಲಿ ಪದೇಪದೇ ಮನವಿ ಮಾಡಿಕೊಂಡಿದ್ದರಿಂದ ನಾನು ಅಮ್ರಪಾಲಿ ಸುರೇಶ್ ಅವರಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ.
ತಾಲೂಕಿನಾದ್ಯಂತ ಸಂಪರ್ಕವಿರುವ ಹಾಗೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸ್ಪಂದಿಸುವ ಸುರೇಶಣ್ಣನಿಂದ ಟ್ರಸ್ಟಿಗೆ ಸಹಾಯವಾಗಬಹುದು ಎಂದು ನನ್ನ ಉದ್ದೇಶವಾಗಿತ್ತು. ಪದೇ ಪದೇ ನಾನು ನೆನಪಿಸುತ್ತಿದ್ದರಿಂದ ಸುರೇಶಣ್ಣನು ತನ್ನ ಸಂಪರ್ಕದಲ್ಲಿದ್ದ ಹಾಗೂ ಗೋಶಾಲೆ ಪ್ರಾರಂಭಿಸಲು ಒಂದು ಟ್ರಸ್ಟ್ ಅನ್ನು ರಚಿಸಿಕೊಂಡಿದ್ದ ವೆಂಕಟರಮಣ ಭಟ್ಟರನ್ನು ನನಗೆ ಪರಿಚಯಿಸಿದರು. ಇವರು ತಮ್ಮ ಟ್ರಸ್ಟಿಗೆ ಕೆಲವು ಸಂಸ್ಥೆಗಳಿಂದ ದೇಣಿಗೆ ಪಡೆಯುವ ಪ್ರಯತ್ನದಲ್ಲಿದ್ದಾರೆ. ನಿಮ್ಮ ಅತ್ತಿಗೆಗೆ ಸಹಾಯವಾಗುವುದಾದರೆ ಇವರ ಸಲಹೆ ಸಹಕಾರ ಪಡೆಯಲಿ ಎಂದು ಹೇಳಿದಾಗ ನಾನು ಕಾನ್ಫರೆನ್ಸ್ ಕಾಲ್ ಮುಖಾಂತರ ಮೊದಲ ಬಾರಿಗೆ ನನ್ನ ಅತ್ತಿಗೆಗೆ ಅಮ್ರಪಾಲಿ ಸುರೇಶ್ ಮತ್ತು ವೆಂಕಟರಮಣ ಭಟ್ ರವರನ್ನು ಪರಿಚಯೇಸಿದೆ.
ನಂತರ ನನ್ನ ತಂದೆಯ ಆರೋಗ್ಯ ವಿಚಾರಿಸಲು ಬಂದ ಯಶೋಧರವರು ವೆಂಕಟರಮಣ ಭಟ್ ಮತ್ತು ಅಮ್ರಪಾಲಿ ಸುರೇಶ್ ರವರನ್ನು ಭೇಟಿ ಮಾಡಿಸುವಂತೆ ಒತ್ತಾಯಿಸಿದ್ದರಿಂದ ಹೋಟೆಲ್ ಒಂದರಲ್ಲಿ ಭೇಟಿ ಮಾಡಿಸಿದೆ.
ಪಕ್ಕಾ ದಾಖಲೆ ಹಾಗೂ ಯೋಜನಾ ವರದಿಯನ್ನು ತಯಾರಿಸಿ ಕಂಪನಿಯ ಒಪ್ಪಿಗೆ ಪಡೆಯುವ ಪ್ರಕ್ರಿಯೆಯ ಬಗ್ಗೆ ತಿಳಿಸಿ ಸಂಪರ್ಕಿಸಬೇಕಾದ ವ್ಯಕ್ತಿಯ ಫೋನ್ ನಂಬರ್ ನೀಡಿದರು. ನಂತರ ಕಂಪನಿಯ ಜೊತೆ ನೇರ ಸಂಪರ್ಕದಲ್ಲಿದ್ದ ಯಶೋಧರವರು ಒಮ್ಮೆ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರದ್ಯುಮ್ಮರವರನ್ನು ತಮ್ಮ ಕಾಲೇಜಿಗೆ ಕರೆಸಿಕೊಂಡು ದಾಖಲೆಗಳನ್ನು ತೋರಿಸಿ ಇರುವುದನ್ನು ಬಿಟ್ಟರೆ ಸುರೇಶಣ್ಣರವರಾಗಲಿ ವೆಂಕಟರಮಣ ಭಟ್ಟರವರಾಗಲಿ ಇದುವರೆಗೆ ಆಕೆಯ ಸಂಸ್ಥೆಗೆ ಭೇಟಿ ನೀಡಿ ಆಮಿಷ ಒಡ್ಡಿದ್ದಾರೆ ಅಥವಾ ಹಣ ಪಡೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ.
ಬದಲಾಗಿ ಆಕೆಗೆ ದೇಣಿಗೆ ನೀಡುವ ಕಂಪನಿಗೆ ಫೆಸಿಲಿಟೆಟಿಂಗ್ ಫೀಸ್ ನೀಡಲು ಕೂಡ ಟ್ರಸ್ಟ್ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಹಣ ಹೊಂದಿಸಲು ನನ್ನಲ್ಲಿ ವಿನಂತಿಸಿದರು. ಆ ಸಂದರ್ಭದಲ್ಲಿ ನನ್ನ ತಂದೆಯವರು ತೀರಿಕೊಂಡಿದ್ದರಿಂದ ನನ್ನ 5 ಲಕ್ಷ ಸೇರಿದಂತೆ ನನ್ನ ಸ್ನೇಹಿತರಿಂದ ಒಟ್ಟು 15ಲಕ್ಷ ಹಣವನ್ನು ಅವರ ಮನವೊಲಿಸಿ ಬಡ್ಡಿ ರಹಿತವಾಗಿ ನನ್ನ ಅತ್ತಿಗೆಗೆ ಒಂದು ತಿಂಗಳ ಅವಧಿಯ ಕೈಗಡ ಪಡೆದು ಸಂಪೂರ್ಣ ನನ್ನದೇ ಜವಾಬ್ದಾರಿಯ ಮೇರೆಗೆ ಬೆಂಗಳೂರಿಗೆ ಹೋಗಿ ಆಕೆಯ ತಮ್ಮ ಸುನಿಲನಿಗೆ ದಿನಾಂಕ 4.12.2025 ರಂದು ನಗದು ಹಣವನ್ನು ನೀಡಿ ಆಕೆಯ ಖಾತೆಗೆ ಜಮಾ ಮಾಡಿಸಿರುತ್ತೇವೆ.
ಎರಡು, ಮೂರು ವಾರಗಳ ನಂತರ ನಾನು ನನ್ನ ಅತ್ತಿಗೆ ಪಡೆದ ಹಣವನ್ನು ವಾಪಾಸ್ಸು ನೀಡುವಂತೆ ಕೇಳಿಕೊಂಡಾಗ ಪೂರಕವಾದ ಉತ್ತರ ನೀಡದೆ ಹಾರಿಕೆಯ ಮಾತನಾಡಿದರು. ಒಂದು ದಿನ ಅಚಾನಕ್ಕಾಗಿ ಹೆಣ್ಣೂರು ಪೊಲೀಸ್ ಸ್ಟೇಷನ್ ನಲ್ಲಿ ಸಹಾಯ ಪಡೆದವರ ವಿರುದ್ಧವೇ ದೂರ ದಾಖಲಿಸಿರುವುದು ನನ್ನ ಮನಸ್ಸಿಗೆ ನೋವಾಗಿದೆ.
ಸಮಾಜದಲ್ಲಿ ಗೌರವಾ - ಘನತೆಯನ್ನು ಹೊಂದಿರುವ ಅಮ್ರಪಾಲಿ ಸುರೇಶ್, ವೆಂಕಟರಮಣ ಭಟ್, ಪುದ್ಯುಮ್ಮ ರವರುಗಳು ಯಶೋಧರವರಿಗೆ ಮೋಸ ವಂಚನೆ ಮಾಡಿದ್ದಾರೆ ಎಂಬುದು ಶುದ್ಧ ಸುಳ್ಳು.
ಇದಕ್ಕಿಂತಲೂ ಮುಖ್ಯವಾಗಿ, ಈ ಪ್ರಕರಣದ ಹಿಂದೆ ಸಂಚು ರೂಪಿಸಿ ಸುಳ್ಳು ಪ್ರಕರಣ ದಾಖಲಿಸಲು ಪ್ರೇರೇಪಿಸಿದ ರಾಜಕೀಯ ಮಹಾನ್ ವ್ಯಕ್ತಿಯ ಮುಖವೂ ಬಹಿರಂಗವಾಗಬೇಕು. ಜನರ ಸೇವೆ ಮಾಡುವ ತಮ್ಮ ಅಮೂಲ್ಯ ಸಮಯವನ್ನು ಭರಿಸಿದ ಸಂಪನ್ಮೂಲಗಳ ಬಗೆಗೆ, ಸತ್ಯ ಹೊರಬರುವಂತೆ ಈ ಪ್ರಕರಣದ ಬಗ್ಗೆ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ.
ಅಮ್ರಪಾಲಿ ಸುರೇಶ್, ವೆಂಕಟರಮಣ ಭಟ್, ಪ್ರುದ್ಯುಮ್ಮ ಮತ್ತು ಬೆಂಗಳೂರಿನಲ್ಲಿ ವಾಸಿಸುವ ಯಶೋಧರ ನಡುವೆ ಯಾವುದೇ ವ್ಯವಹಾರಗಳು ನಡೆದಿಲ್ಲ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ನಾನು ಎಲ್ಲಿ ಬೇಕಾದರು-ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ.
ಅನುದೀಪ್ (ಪುಟ) ಕುಶಾವತಿ