ತೀರ್ಥಹಳ್ಳಿಯ ಅಹಿಂದ ವರ್ಗ ಸಂಘಟಿತರಾಗೋಣ - ಸಚಿನ್ ಗರಗ
ಅಹಿಂದ ವರ್ಗ ಇಂದಿಗೂ ಶೋಷಣೆಗೆ ಒಳಗಾಗಿದೆ. ಬಹುಸಂಖ್ಯಾತರಾಗಿದ್ದು ಇಂದಿಗೂ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗಿಲ್ಲ. ಅಹಿಂದ ವರ್ಗ ಒಂದು ಮಾಡುವ ಉದ್ದೇಶದಿಂದ ತಾಲ್ಲೂಕು ಮಟ್ಟದ ಅಹಿಂದ ವರ್ಗಗಳ ಪ್ರಮುಖರ ಸಂಘಟನೆಯ ಸಭೆಯನ್ನು ಮಾರ್ಚ್ 16ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಯೂರ ಹೋಟೆಲ್ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಮಲೆನಾಡು ಅಹಿಂದ ಸಂಘಟನಾ ವೇದಿಕೆಯ ಅಧ್ಯಕ್ಷ ಸಚಿನ್ ಗರಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದಾದ್ಯಂತ
ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತರು) ಮತದಾರರು ಬಹುಸಂಖ್ಯಾತರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ
ಯಾವ ಪ್ರಮುಖ ಪಕ್ಷಗಳಲ್ಲಿಯೂ ಸಂಘಟನೆಯ ಕೊರತೆಯಿಂದ ಈ ವರ್ಗಗಳು ಸ್ಪರ್ಧಿಸಲು ಸಾಧ್ಯವಾಗಿಲ್ಲ. ಇಲ್ಲಿನ
ರಾಜಕಾರಣಕ್ಕೆ ಅಹಿಂದ ನಾಯಕತ್ವ ಅವಶ್ಯವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ, ಆರ್ಥಿಕ
ಮತ್ತು ರಾಜಕೀಯವಾಗಿ ಹಿಂದುಳಿದ ಸಮುದಾಯಗಳಿಗೆ ಅಧಿಕಾರ ಮತ್ತು ಹಕ್ಕುಗಳನ್ನು ಒದಗಿಸುವುದು ನಮ್ಮ ಸಂಘಟನೆಯ
ಪ್ರಮುಖ ಉದ್ದೇಶವಾಗಿದೆ. ಅಹಿಂದ ವರ್ಗದ ನಾಯಕರು ಗುಲಾಮಿ ಮನಸ್ಥಿತಿಯಿಂದ ಹೊರಬರಬೇಕು. ಮೀಸಲಾತಿಗೆ
ಸೀಮಿತವಾದ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಯಲ್ಲೇ ತೃಪ್ತಿ ಪಡದೆ ಶಾಸನ ಸಭೆಗೆ ಸೇರುವ ಕಡೆಗೆ
ಗಮನ ಹರಿಸಬೇಕು ಎಂದು ಹೇಳಿದ್ದಾರೆ.
