ಹಂಗಾಮಿ ಮನೆದಳ ಪತ್ರ
ಖಾಯಂಗೆ ಒತ್ತಾಯ
ಕಂದಾಯ ಸಚಿವ ಕೃಷ್ಣಬೈರೇಗೌರಿಗೆ
ಮನವಿ ಸಲ್ಲಿಸಿದ ರಮೇಶ್ ಹೆಗ್ಡೆ
ಶಿವಮೊಗ್ಗಕ್ಕೆ ಗುರುವಾರ
ಆಗಮಿಸಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡರನ್ನು ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎಂ.ರಮೇಶ್
ಹೆಗ್ಡೆ ಭೂಮಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸರಿ ಪಡಿಸುವಂತೆ ಮನವಿ ಸಲ್ಲಿಸಿದರು.
ಮಲೆನಾಡು ಭಾಗದ ಸೊಪ್ಪಿನಬೆಟ್ಟ,
ಕಾನು ಭೂಮಿಗಳಲ್ಲಿ ಮಾಡಿರುವ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು.
ಶಿವಮೊಗ್ಗ, ಚಿಕ್ಕಮಗಳೂರು
ಹಾಗೂ ಹಾಸನ ಜಿಲ್ಲೆಗಳಲ್ಲಿ ಮೈಸೂರು ಲ್ಯಾಂಡ್ ರೆವೆನೂ ಕೋಡ್ 1888 ರಡಿಯಲ್ಲಿ ಮಂಜೂರು ಮಾಡಲಾದ ʼಹಂಗಾಮಿ
ಮನೆದಳ ಪತ್ರʼಗಳನ್ನು ಖಾಯಂ ಗೊಳಿಸಬೇಕು.
ಶಿವಮೊಗ್ಗ ಜಿಲ್ಲೆಯ
ಹೊಸನಗರ (ನಗರ ಹೋಬಳಿ) ಹಾಗೂ ಸಾಗರ ತಾಲ್ಲೂಕು ಅನೇಕ ಕಂದಾಯ ಗ್ರಾಮಗಳ ಪಹಣಿ ದಾಖಲೆಯಲ್ಲಿ (ಯಾವುದೇ
ಅರಣ್ಯ ಕಾಯ್ದೆ ಅಡಿಯಲ್ಲಿ ಅರಣ್ಯವೆಂದು ಅಧಿಸೂಚನೆ ಆಗದಿದ್ದರೂ ಸಹ) ಸೂಚಿತ ಅರಣ್ಯವೆಂದು ದಾಖಲಾಗಿರುವುದ್ದನ್ನು
ಕೈಬಿಡಬೇಕು.
ಕರ್ನಾಟಕ ಭೂಸುಧಾರಣೆ
ಕಾಯ್ದೆ ಅಡಿಯಲ್ಲಿ 'ಅಳತೆಗೆ ಒಳಪಟ್ಟು' ಮಂಜೂರು ಮಾಡಲಾಗಿರುವ
ಭೂಮಿಗಳಲ್ಲಿ ಪಾವತಿ ಖಾತೆ ಹಾಗೂ ಕುಟುಂಬದ ಸದ್ಯಸರಲ್ಲಿ
'ಹಿಸ್ಸಾ ಪತ್ರ' ಮಾಡಿಕೊಳ್ಳಲು 11-ಈ ನಕ್ಷೆಗೆ ವಿನಾಯತಿ ನೀಡುವಂತೆ ಒತ್ತಾಯಿಸಿದರು.
