ರಂಗಕಲೆಯ ಬೆಳವಣಿಗೆಗೆ ನಟಮಿತ್ರರು ತಂಡದ ಕೊಡುಗೆ ಅಪಾರ – ಡಾ.ಆರ್.ಎಂ.ಮಂಜುನಾಥ ಗೌಡ
ಕೇಂದ್ರ ಸರ್ಕಾರದ
ಸಂಸ್ಕೃತಿ ಸಚಿವಾಲಯ ಆಯೋಜನೆಯ 25ನೇ ಅಂತರಾಷ್ಟ್ರೀಯ ರಂಗ ಮಹೋತ್ಸವಕ್ಕೆ ಫೆಬ್ರವರಿ 8 ರಂದು ಆಂಧ್ರಪ್ರದೇಶದ
ಗುಂಟೂರಿನಲ್ಲಿ ಪ್ರದರ್ಶನ ನೀಡಲು ತೆರಳುತ್ತಿರುವ “ಆ ಊರು ಈ ಊರು” ನಾಟಕ ತಂಡಕ್ಕೆ ಪಟ್ಟಣ ಪಂಚಾಯಿತಿ
ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ
ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ರಂಗಕಲೆಗೆ ಕರ್ನಾಟಕದಲ್ಲಿ ಬಹುದೊಡ್ಡ
ಇತಿಹಾಸವಿದೆ. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ಕೆ.ವಿ.ಸುಬ್ಬಣ್ಣ ರಂತಹ ಮಹಾನ್ ಪ್ರತಿಭೆಗಳು
ಇಲ್ಲಿ ಈ ಕಲೆಯನ್ನು ಅರಳಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಟಮಿತ್ರರು ತಂಡ ನಾಟಕ ಕಲೆಯ ಬೆಳವಣಿಗೆಗೆ
ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ
ಬಾಳೇಬೈಲು ರಾಘವೇಂದ್ರ, ಡಿ.ಎಸ್.ವಿಶ್ವನಾಥ ಶೆಟ್ಟಿ, ಮಂಜುನಾಥ ಸ್ವಾಮಿ ಮತ್ತಿತರರು ಮಾತನಾಡಿದರು.
ಗ್ಯಾರಂಟಿ ಸಮಿತಿ
ಅಧ್ಯಕ್ಷ ನಾಬಳ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ
ರಮೇಶ್ ಇದ್ದರು.
