ಡಿಸೆಂಬರ್ 25 ಹಾರೋಗೊಳಿಗೆ ಸಹಕಾರ ಸಂಘದ ಸುವರ್ಣ ಮಹೋತ್ಸವ

ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮದುಬಂಗಾರಪ್ಪ ಆಗಮನ

ಹಾರೋಗೊಳಿಗೆ ವ್ಯವಸಾಯ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್‌ 25 ಗುರುವಾರ ಏರ್ಪಡಿಸಲಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುವರು.

"ಸಾರ್ಥಕ ಸಹಕಾರ" ಸ್ಮರಣ ಸಂಚಿಕೆಯನ್ನು ಶಾಸಕ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಲಿದ್ದು ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಕಡಿದಾಳು ದಿವಾಕರ, ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ್ ಶೆಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾರತಿ ಮೋಹನೇಶ್ ಭಾಗವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಸಹಕಾರಿ ಅಧ್ಯಕ್ಷ ತುಂಬೆಕೊಡಿಗೆ ರತ್ನಾಕರ್ ವಹಿಸಲಿದ್ದಾರೆ. 1976ರಲ್ಲಿ ಸ್ಥಾಪನೆಯಾದ ಸಹಕಾರಿಗೆ ಈಗ 50 ಹರೆಯ. ಅತ್ಯಂತ ಪುಟ್ಟ ಸಹಕಾರಿಯಾಗಿದ್ದರು ಮೂರು ಬಾರಿ ಜಿಲ್ಲೆಯ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಸಂಘ ಕ್ಕಿದೆ. ಹಾಲಿ ಸಂಘದಲ್ಲಿ ವರ್ಗದ 665 ಹಾಗೂ ಸಿ ವರ್ಗದ 535 ಜನ ಸದಸ್ಯರು ಇದ್ದಾರೆ. ಸಂಘವು2024-25 ಸಾಲಿನಲ್ಲಿ 13 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಿದ್ದು 18 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ಒಟ್ಟಾರೆ 10 ಕೋಟಿಗೂ ಹೆಚ್ಚಿನ ಸಾಲ ವಿತರಿಸಲಾಗಿದೆ.

ಉಪಾಧ್ಯಕ್ಷರಾಗಿ ಹೇಮರಾಜ್ ಚಿಕ್ಕಳ್ಳಿ, ನಿರ್ದೇಶಕರಾಗಿ ಕಡಿದಾಳು ತಾರಾನಾಥ್, ತೋರಳಿ ಪ್ರಸನ್ನ ಕುಮಾರ, ಗೊರಗಲ್ಲು ಯೋಗೇಂದ್ರ, ದಿವರಕೊಪ್ಪ ಪ್ರಹ್ಲಾದ್, ಹರಳಿ ಮಠ ರಮೇಶ್, ಮಧುಗೆರೆ ಮಹೇಶ್, ಉದಯ್ ಕುಮಾರ, ಸಸಿತೋಟ ದೇವೇಂದ್ರ, ಕಲ್ಪನಾ ತೋರಳಿ, ಅರ್ಚನಾ ಹುಲ್ಕೋಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಎನ್.ಕೆ. ಪ್ರೀತಿಶ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾರೆ. ಇದೆ ಸಂಧರ್ಭದಲ್ಲಿ ಸಂಘದ ಸಹಕಾರಿ ಪಯಣದ ಕುರಿತು "ಸಾರ್ಥಕ ಸಹಕಾರ "ಎಂಬ ಸ್ಮರಣ ಸಂಚಿಕೆಯನ್ನು ಹೊರಡಿಸಲಾಗಿದ್ದು ಹಿರಿಯ ಪತ್ರಕರ್ತ, ಲೇಖಕ ನೆಂಪೆ ದೇವರಾಜ್ ಇದರ ಸಂಪಾದಕರಾಗಿದ್ದು ಕಡಿದಾಳು ಪ್ರಕಾಶ್ ಪ್ರಧಾನ ಸಂಪಾದಕರಾಗಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post