ಐದು ತಿಂಗಳ ಹಸುಗೂಸು ಬಿಟ್ಟು ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕುಡುಮಲ್ಲಿಗೆ ಅಕ್ಸಲ್ ಕೊಪ್ಪ ದಲ್ಲಿ ನಡೆದಿದೆ. ರಮ್ಯಾ ಮಣಿಕಂಠ (28) ಎಂಬುವರು ವಿಷ ಸೇವಿಸಿದ್ದು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರು ಪ್ರಯೋಜನವಾಗದೆ ಸಾವಿಗೀಡಾದರು ಎನ್ನಲಾಗಿದೆ. ರಮ್ಯಾ ಪತಿ ಮಣಿಕಂಠ, ಹಾಗೂ ಎರಡೂವರೆ ವರ್ಷ ಮತ್ತು ಐದು ತಿಂಗಳ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.