6 ಕೆಜಿ ಅಯ್ಯಪ್ಪ ಪೀಠ ಹೊತ್ತು ಶಬರಿಮಲೆ ಯಾತ್ರೆ
18 ದಿನ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿದ ತೀರ್ಥಹಳ್ಳಿಯ ಅಭಿಷೇಕ್ ಮತ್ತು ತಂಡ
ತೀರ್ಥಹಳ್ಳಿಯ ಕುರುವಳ್ಳಿಯ ಗೌರಿಶಂಕರ ದೇವಸ್ಥಾನದಿಂದ ಸುಮಾರು 742 ಕಿ.ಮೀ. ಕಾಲ್ನಡಿಗೆಯಲ್ಲಿ ಶಬರಿಮಲೆ ಯಾತ್ರೆಯನ್ನು ಇಲ್ಲಿನ ಅಭಿಷೇಕ್ ಮತ್ತು ತಂಡ ಪೂರ್ಣಗೊಳಿಸಿದ್ದಾರೆ.ವಿಶೇಷವೆಂದರೆ ಗುರುಸ್ವಾಮಿಯಾಗಿರುವ ಅಭಿಷೇಕ್ ತಲೆಯ ಮೇಲೆ 6 ಕೆ.ಜಿ. ತೂಕದ ಅಯ್ಯಪ್ಪ ದೇವರ ಮೂರ್ತಿಯನ್ನು ಹೊತ್ತುಕೊಂಡು ಯಾತ್ರೆ ಮಾಡಿದ್ದಾರೆ. ಯಾತ್ರೆಗಾಗಿ ನವೆಂಬರ್ 1 ರಂದು ಹೊರಟಿರುವ ನವೆಂಬರ್ 18ಕ್ಕೆ ಶಬರಿಮಲೆ ತಲುಪಿದ್ದಾರೆ. ಮಂಡಲ ಪೂಜೆಯನ್ನು ಪೂರೈಸಿಕೊಂಡು ಹಿಂದಿರುಗಿದ್ದಾರೆ.
.jpg)