ಆತ್ಮವಿಮರ್ಶೆಯ ಹಾದಿಯೇ
ಬುದ್ಧನ ನಂತರ ಗಾಂಧಿಯನ್ನು ಜಗತ್ತಿನ ದೊಡ್ಡ ದಾರ್ಶನಿಕನನ್ನಾಗಿ ರೂಪಿಸಿತು
ವಿಶ್ರಾಂತ ಪ್ರಾಧ್ಯಾಪಕ
ಡಾ.ಬಿ.ಎಂ ಜಯಶೀಲ
ತಪ್ಪುಗಳನ್ನು ಮಾಡುವುದು
ಮನುಷ್ಯಸಹಜ. ಆದರೆ ಆ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವುದೇ ವಿಕಾಸ. ಗಾಂಧಿ ಹೀಗೆ ತನ್ನ ತಪ್ಪುಗಳನ್ನು
ಸ್ವತಃ ಅರಿತು ತಿದ್ದಿಕೊಂಡು ವಿಕಾಸಗೊಂಡರು. ಅದನ್ನು ಮುಕ್ತವಾಗಿ ಹಂಚಿಕೊಂಡರು. ಹೊರನೋಟಕ್ಕೆ ಸರಳವೆನಿಸುವ
ಈ ಆತ್ಮವಿಮರ್ಶೆಯ ಹಾದಿಯೇ ಬುದ್ಧನ ನಂತರ ಗಾಂಧಿಯನ್ನು ಜಗತ್ತಿನ ದೊಡ್ಡ ದಾರ್ಶನಿಕನನ್ನಾಗಿ ರೂಪಿಸಿತು
ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಎಂ.ಜಯಶೀಲ ಅವರು ತಿಳಿಸಿದರು.
ಹರಳಿಮಠದ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ
ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ
ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.
ಗಾಂಧಿಯ ತತ್ವಗಳು
ಎಲ್ಲರಿಗೂ ಪ್ರಿಯ. ಆದರೆ ಅದರ ಪಾಲನೆ ಅತ್ಯಂತ ಕಡಿಮೆ. ಗಾಂಧಿ ಒಂದು ವೇಳೆ ಪ್ರಧಾನಿಯಾಗಿದ್ದರೆ ಹೇಗಿರುತ್ತಿದ್ದರು
ಎನ್ನುವುದಕ್ಕೆ ಗಾಂಧಿ ಜನಿಸಿದ ದಿನದಂದೇ ಹುಟ್ಟಿದ ಪ್ರಧಾನಮಂತ್ರಿಯಾಗಿ ಸರಳತೆ, ಪ್ರಾಮಾಣಿಕತೆಯಿಂದ
ಸೇವೆ ಸಲ್ಲಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿದ್ದರು ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಸರ್ಜಾಶಂಕರ್
ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅಧ್ಯಕ್ಷತೆ
ವಹಿಸಿದ್ದರು. ನಿವೃತ್ತ ಶಿಕ್ಷಕ ರಮೇಶ್, ಊರ ಪ್ರಮುಖರಾದ ಶ್ರೀಮತಿ ನಾಗರತ್ನ, ಪ್ರದೀಪ್, ಯಾಕೂಬ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯೋಪಾಧ್ಯಾಯರಾದ
ಜಯಪ್ಪ ಸ್ವಾಗತಿಸಿದರು ಶಿಕ್ಷಕ ನಾಗಪ್ಪ ನಿರೂಪಿಸಿ ವಂದಿಸಿದರು.
5ನೇ ತರಗತಿಯಲ್ಲಿ
ಕು. ಸ್ವಸ್ತಿಕ್, ೧೦ನೇ ತರಗತಿಯಲ್ಲಿ ಕು.ಅಂಶು ಎಚ್.ಎಂ, ಕು.ಸಂಜನಾ ಕೆ.ಆರ್, ಕು.ಅಫೀಜ್ ಎಚ್.ಎ 32ನೇ
ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.
