ರಾಮೇಶ್ವರ ದೇವಾಸ್ಥಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಭಾರತ ಸರ್ಕಾರದ ಪ್ರವಾಸೋದ್ಯಮ
ಇಲಾಖೆ ಮತ್ತು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಸಹಯೋಗದಲ್ಲಿ ಎರಡನೇ ಕಂತಿನ ಮೈಸೂರು ಸಂಗೀತ ಸುಗಂಧ
ಉತ್ಸವ 2025 ಇದೇ ಅಕ್ಟೊಬರ್ 11 ರಿಂದ 12 ರ ತನಕ ಮೈಸೂರಿನಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ಸಂಗೀತದ
ವಿವಿಧ ಆಯಾಮಗಳನ್ನು ಈ ಸಂಗೀತ ಕಾರ್ಯಕ್ರಮ ಬಿಂಬಿಸಲಿದ್ದು ಮಹಾನ್ ರಚನೆಕಾರರ ಕೃತಿಗಳನ್ನು ಶುದ್ಧ
ಶಾಸ್ತ್ರೀಯ ಶೈಲಿಯಲ್ಲಿ ಸಾದರ ಪಡಿಸಲಾಗುವುದು. ವಿಶೇಷವೆಂದರೆ ಅದಕ್ಕೂ ಮೊದಲು ಪೈಲಟ್ ಪ್ರಾಜೆಕ್ಟ್
ರೂಪದಲ್ಲಿ ಪೂರ್ವಭಾವಿಯಾಗಿ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಾಳೆ ಭಾನುವಾರ 4 ಗಂಟೆಯಿಂದ
10 ಗಂಟೆ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಡೀ ದೇಶದಲ್ಲಿ ಇಂತಹ ಗೌರವ
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಾಲಯಕ್ಕೆ ದೊರೆತಿರುವುದು ಅತ್ಯಂತ ಅಪೂರ್ವ ಹಾಗೂ ಶ್ರೀ ರಾಮೇಶ್ವರ
ದೇವರ ಆಶೀರ್ವಾದ ಇದು ಐತಿಹಾಸಿಕ ವಿದ್ಯಮಾನ ಹಾಗಾಗಿ ಕ್ಷೇತ್ರದ ಜನತೆ ಈ ಕಾರ್ಯಕ್ರಮಕ್ಕೆ ಆಗಮಿಸಿ
ಯಶಸ್ವಿಗೊಳಿಸಿಕೊಡಬೇಕೆಂದು ದೇವಸ್ಥಾನದ ಪರವಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಿ ಎಸ್ ವಿಶ್ವನಾಥ್
ಶೆಟ್ಟಿ ಕೋರಿದ್ದಾರೆ
