ಎಲೆಚುಕ್ಕಿ ರೋಗಕ್ಕೆ ನೊಂದು ರೈತ ಆತ್ಮಹತ್ಯೆ

ಸುಳುಗೋಡು ಗ್ರಾಮದ ರಾಮಣ್ಣ ಗೌಡ ಆತ್ಮಹತ್ಯೆ
ಹೊಸನಗರ ತಾಲೂಕು ಸುಳಗೋಡು ಗ್ರಾಮ ಪಂಚಾಯತ್ (ಯಡೂರು) ಕಾನುಗೋಡು ರಾಮಣ್ಣ ಗೌಡ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಾನು ಅತ್ಯಂತ ಶ್ರಮ ವಹಿಸಿ ಮಾಡಿದ್ದ ಸುಮಾರು 2 ಎಕರೆ ಅಡಿಕೆ ತೋಟ ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿ ಸರ್ವ ನಾಶವಾಗಿದ್ದು ನೋಡಿ ಮನ ನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇವರ ಪತ್ನಿ ಕಳೆದ 3 ತಿಂಗಳ ಹಿಂದೆ ಅನಾರೋಗ್ಯ ದಿಂದ ಸಾವನ್ನಪ್ಪಿದ್ದರು.. ಇವರು ಪುತ್ರ, ಒಬ್ಬಳು ಪುತ್ರಿ ಹಾಗೂ ಸೊಸೆಯನ್ನು ಬಿಟ್ಟು ಅಗಲಿದ್ದಾರೆ.
ಸಾಮಾನ್ಯವಾಗಿ ಈ ವರ್ಷ ಅತೀ ಹೆಚ್ಚು ಮಳೆಯಿಂದ ನಗರ ಹೋಬಳಿ ಭಾಗದ ಸುಮಾರು 80% ಅಡಿಕೆ ಕೊಳೆ ರೋಗ ಮತ್ತು ಎಲೆಚುಕ್ಕಿ ರೋಗದಿಂದ ನಾಶವಾಗಿದ್ದು ರೈತರ ಗೋಳು ಕೇಳುವವರಿಲ್ಲದಾಗಿದೆ.
ಜನಪ್ರತಿನಿದಿಗಳು ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಿ ಈ ಭಾಗದ ಜನರಿಗೆ ವಿಶೇಷ ಪ್ಯಾಕೇಜ್ ನೀಡುವ ಕೆಲಸ ಮಾಡಿದರೆ ಈ ಭಾಗದ ರೈತರು ಜೀವಂತ ಉಳಿಯಬಹುದು.
ಆತ್ಮಹತ್ಯೆ ಮಾಡಿಕೊಂಡ ರಾಮಣ್ಣ ಗೌಡರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂಬುದು ನಮ್ಮೆಲ್ಲರ ಓತ್ತಾಸೆ.

ವರದಿ ; ಹೆಚ್. ವಾಸಪ್ಪ, ಮಾಸ್ತಿಕಟ್ಟೆ
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post