ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಕೋಣಂದೂರು-ಆಗುಂಬೆ ಸಂಯುಕ್ತ ತಂಡ ಪ್ರಥಮ
ಸಾಗರದ ಇಂದಿರಾ ಗಾಂಧಿ ವಸತಿ ಶಾಲೆ ಇರುವಕ್ಕಿಯಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷದ ಒಳಗಿನ ಬಾಲಕರ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕೋಣಂದೂರು ಕೆ.ಪಿ.ಎಸ್. ಮತ್ತು ಆಗುಂಬೆ ಎಸ್.ವಿ.ಎಸ್. ಬಾಲಕರನ್ನು ಒಳಗೊಂಡ ಸಂಯುಕ್ತ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಸಂಯುಕ್ತ ತಂಡ ಬೆಂಗಳೂರು ಮಟ್ಟದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಈ ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಕಿ ವನಿತಾ ಬಿ ಮತ್ತು ದೈಹಿಕ ಶಿಕ್ಷಕ ಜಿತೇಂದ್ರ ಕುಮಾರ್ ಟಿ.ಆರ್. ತರಬೇತಿ ನೀಡಿರುತ್ತಾರೆ. ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಿಗೆ ಶಾಲಾ ಉಪಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ, ಗ್ರಾಮ ಪಂಚಾಯತಿಯವರು, ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.