ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೈಜೋಡಿಸಿ
ನಿಮ್ಮ ಸುತ್ತಮುತ್ತಲು
ಅನೇಕ ಕಾನೂನು ಬಾಹಿರ ಘಟನೆಗಳು ವರದಿಯಾಗುತ್ತದೆ. ಅವುಗಳ ಮಾಹಿತಿಯನ್ನು ತಕ್ಷಣವೇ ಬೀಟ್ ಪೊಲೀಸ್
ಸಿಬ್ಬಂದಿಗಳಿಗೆ ನೀಡಿದರೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ನೆರಹೊರೆಯ ಭಾಗದಲ್ಲಿ
ಯಾರು ಏಕೆ ಓಡಾಡುತ್ತಾರೆ ಎಂಬ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ತೀರ್ಥಹಳ್ಳಿ ವೃತ್ತ ನಿರೀಕ್ಷಕ,
ಮಾಳೂರು ಪ್ರಭಾರ ವೃತ್ತ ನಿರೀಕ್ಷಕ ಇಮ್ರಾನ್ ಬೇಗ್ ಆಗುಂಬೆಯಲ್ಲಿ ಶನಿವಾರ ಉಪವಿಭಾಗ, ಮಾಳೂರು ವೃತ್ತ
ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್-2025 ಕಾರ್ಯಕ್ರಮದ ಮಾಹಿತಿ ಹಂಚಿಕೊಂಡರು.
ಡ್ರಗ್ಸ್ ಸೇವನೆ,
ವೇಗವಾಗಿ ವಾಹನ ಚಲಾಯಿಸುವುದು, ವಾಹನಗಳಲ್ಲಿ ಸರ್ಕಸ್ ಮಾಡುವುದು, ಮಕ್ಕಳಿಗೆ, ಮಹಿಳೆಯರಿಗೆ ತೊಂದರೆ
ನೀಡುತ್ತಿದ್ದರೆ ನೇರವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿ. ನಿಮ್ಮ ಮನೆಯ ಸುತ್ತಮುತ್ತಲ ಮಾಹಿತಿ
ಲಭಿಸಿದರೆ ಜನಸ್ನೇಹಿಯಾದ ಪೊಲೀಸ್ ಆಡಳಿತ ನೀಡಬಹುದು. ಹೊರಗಿನವರ ಬಗ್ಗೆ ಎಚ್ಚರಿಕೆ ಇರಬೇಕು ಎಂದರು.
ಸಾರ್ವಜನಿಕರು ಮತ್ತು
ಪೊಲೀಸರ ನಡುವಿನ ಸಂಬಂಧ ಹೆಚ್ಚಿಸಲು ಸಹಕಾರಿಯಾಗಿದೆ. ಜನರೊಂದಿಗೆ ಸಮನ್ವಯ ಸಾಧಿಸಿ ಕಾನೂನು ಬಾಹಿರ
ಚಟುವಟಿಕೆ ತಡೆಯಲು ಈ ಕಾರ್ಯಕ್ರಮ ಅನುಕೂಲವಾಗಿದೆ. ಕಷ್ಟದ ಸಮಯದಲ್ಲಿ ತುರ್ತು ಕರೆಗಳನ್ನು ಮಾಡಬಹುದು.
ನೆರಹೊರೆಯ ಮಾಹಿತಿ ಲಭ್ಯವಾದರೆ ಜನಸ್ನೇಹಿ ಸೇವೆ ನೀಡಲು ಅನುಕೂಲವಾಗುತ್ತದೆ. ನಿರಂತರವಾಗಿ ಗ್ರಾಮಗಳಲ್ಲಿ
ಗಸ್ತು ಸಿಬ್ಬಂದಿಗಳು ಸಂಚರಿಸುತ್ತಿರುತ್ತಾರೆ. ಹೊರಗಿನಿಂದ ಕೆಲಸಕ್ಕೆ ಆಗಮಿಸುವವರ ಬಗ್ಗೆಯೂ ಎಚ್ಚರವಿರಲಿ
ಎಂದರು.
ಪಿಎಸ್‌ಐ ಶಿವನಗೌಡ, ಎಎಸ್‌ಐ ಪಾರ್ವತಮ್ಮ, ಉಮೇಶ್ ನಾಯ್ಕ್, ಸಿಬ್ಬಂದಿಗಳಾದ ನಾಗಾರ್ಜುನ್, ಅನಿಲ್ ಹಿರೇಬೈಲು, ಸ್ಥಳೀಯರಾದ ವೆಂಕಟೇಶ್ ಹೆಗಡೆ, ಹಸಿರುಮನೆ ಮಹಾಬಲೇಶ್, ನೇತ್ರಾವತಿ ಚಂದ್ರಹಾಸ, ಕೊರೋಡಿ ಕೃಷ್ಣಪ್ಪ, ಅಜಿತ್ ಅಣ್ಣುವಳ್ಳಿ ಮುಂತಾದವರು ಇದ್ದರು.
.jpeg)
.jpeg)

