ಶಾಲಾ ಮಕ್ಕಳಿಗೆ ನೋಟ್‌ ಬುಕ್‌ ವಿತರಣೆ

ತೀರ್ಥಹಳ್ಳಿಯಲ್ಲಿ ರಾಹುಲ್‌ ಗಾಂಧಿ ಜನ್ಮದಿನ

ಸದೃಢ ಭಾರತ ಕಟ್ಟುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಹಾಕಿಕೊಟ್ಟ ಹಾದಿಯಲ್ಲಿ ಕಾಂಗ್ರೆಸ್‌ ಪಕ್ಷ ಮುನ್ನಡೆಯುತ್ತಿದೆ. ಸುಳ್ಳುಗಳನ್ನೇ ಸತ್ಯ ಮಾಡುವ ಮನಸ್ಥಿತಿಯವರಿಗೆ ಸ್ವಾತಂತ್ರೋತ್ತರ ಭಾರತದ ಕಲ್ಪನೆಗಳು ಇಲ್ಲ. ರಾಹುಲ್‌ ಗಾಂಧಿ ಹಿರಿಯರ ಮಾರ್ಗದರ್ಶನವನ್ನು ಪಾಲಿಸಲು ಸಿಕ್ಕ ದೊಡ್ಡ ಬಳುವಳಿ ಎಂದು ಗುರುವಾರ ರಾಹುಲ್‌ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಯುವ ಕಾಂಗ್ರೆಸ್‌ ವತಿಯಿಂದ ಮೇಲಿನಕುರುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್‌ ಬುಕ್‌ ವಿತರಣೆ ಹಾಗೂ ಜೆ.ಸಿ.ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ ಹೇಳಿದರು.

ರಾಹುಲ್‌ ಗಾಂಧಿಯ ಕುರಿತು ಬಾಲಿಶ ಮಾತುಗಳಿಂದ ಮೂದಲಿಸುವ ವ್ಯಕ್ತಿಗಳಿಗೆ ಆತನೆಂತ ಶಕ್ತಿ ಎಂಬುದರ ಬಗ್ಗೆ ಅರಿವಿಲ್ಲ. ಭಾರತ್‌ ಜೋಡೋ ಮೂಲಕ ದೇಶವನ್ನು ಮತ್ತೊಮ್ಮೆ ಕಟ್ಟಿದ್ದಾರೆ. ಭಾರತವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ಅವರಲ್ಲಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಲಭಿಸುತ್ತಿದ್ದಂತೆ ಹಂಗಿಸುವವರ ಬಾಯಿಗಳು ಬಂದ್‌ ಆಗುತ್ತಿವೆ ಎಂದರು.

“ನೋಟ್‌ ಬುಕ್‌ ವಿತರಣೆ ಬಹಳ ದೊಡ್ಡ ಕೆಲಸವೇನಲ್ಲ. ಕೇವಲ ಸರ್ಕಾರಿ ಶಾಲೆಯ ಮಕ್ಕಳ ಪೋಷಕರ ಹೊರೆ ತಗ್ಗಿಸುವ ಪ್ರಯತ್ನ ಅಷ್ಟೆ. ನೂರಾರು ಕೈಗಳು ಸೇರಿಕೊಂಡರೆ ಓರ್ವ ವಿದ್ಯಾರ್ಥಿಯ ಸಂಪೂರ್ಣ ವೆಚ್ಚವನ್ನು ಭರಿಸಬಹುದು” ಎಂದು ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಪೂರ್ಣೇಶ್‌ ಕೆಳಕೆರೆ ಹೇಳಿದರು.

ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ.ವೆಂಕಟೇಶ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್‌ ಶೇಟ್‌, ಮುಖಂಡರಾದ ರವಿ ಹೊಸ್ಕೆರೆ, ಶ್ರೇಯಸ್‌ ರಾವ್‌, ಆದರ್ಶ ಹುಂಚದಕಟ್ಟೆ, ಬಿ.ಗಣಪತಿ, ರತ್ನಾಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಹಾರೋಗೊಳಿಗೆ ವಿಶ್ವನಾಥ ಇದ್ದರು.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post