ವಾಹನ ಸಂಚಾರ ಒಂದು ಗಂಟೆ ಸ್ಥಗಿತ
ಆಗುಂಬೆಯಲ್ಲಿ ಮಂಗಳವಾರ
142 ಮಿಲಿ ಮೀಟರ್ ಮಳೆಯಾಗಿದ್ದು ಪರಿಣಾಮವಾಗಿ ಆಗುಂಬೆ ಚೆಕ್ ಪೋಸ್ಟ ಬಳಿಯ ಬೃಹತ್ ಮರ ನೆಲಕ್ಕೆ
ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ರಸ್ತೆಗೆ ಮರ ಬಿದ್ದಿರುವುದರಿಂದ ಆಂಬುಲೆನ್ಸ್
ಸಂಚಾರ ಕೂಡ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದೆ.
ಅರಣ್ಯ ತಪಾಸಣಾ ಕೇಂದ್ರದ ಬಳಿ ಪ್ರವಾಸಿಗರು ಹೆಚ್ಚಿದ್ದರು ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ತೆರಳಿದ ಆಗುಂಬೆ ಪಿಎಸ್‌ಐ ಶಿವನಗೌಡ ಎರಡು ಜೆಸಿಬಿ ಯಂತ್ರಗಳ ಸಹಾಯದಿಂದ ಮರವನ್ನು ತೆರವುಗೊಳಿಸಲುವಲ್ಲಿ ಯಶಸ್ವಿಯಾದರು. ಆಗುಂಬೆಯ ಮರ ಕಾಟಾವು ಮಾಡುವ ಯಂತ್ರದ ಸಹಾಯದಿಂದ ಮರವನ್ನು ಕತ್ತರಿಸಲಾಯಿತು. ಒಂದು ಗಂಟೆಗಳ ನಂತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.



.jpeg)