ಹಾಜಿ ಶೇಖ್ ಅಹಮ್ಮದ್
ಫೌಂಡೇಶನ್ ಚಾರಿಟಬಲ್ ಟ್ರಸ್ಟ್
367 ಸಾಧಕ ವಿದ್ಯಾರ್ಥಿಗಳಿಗೆ
ಗೌರವ
ವಿದ್ಯಾರ್ಥಿಗಳು ಬಾಲ್ಯದಿಂದಲೇ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ವೃತ್ತಿಪರ ಕೌಶಲ್ಯ ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗಲಿದೆ ಎಂದು ಕೆನರಾ ಬ್ಯಾಂಕ್ ಮಣಿಪಾಲ ಡಿಜಿಎಂ ದೇವರಾಜ್ ಭಾನುವಾರ ವಿದ್ಯಾಧಿರಾಜ ಸಭಾಭವನದಲ್ಲಿ ಹಾಜಿ ಶೇಖ್ ಅಹಮ್ಮದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್, ನ್ಯಾಷನಲ್ ಸಮೂಹ ಸಂಸ್ಥೆ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೂರದೃಷ್ಟಿಯ ಯೋಚನೆಗಳಿಗೆ
ಇಂದಿನಿಂದಲೇ ಜ್ಞಾನದ ಅಡಿಪಾಯ ಹಾಕಿಕೊಳ್ಳಿ. ವಿದ್ಯಾರ್ಥಿ ವೇತನ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ
ಪಡೆದುಕೊಳ್ಳಿ. ಪಿಯುಸಿ ನಂತರದ ಶಿಕ್ಷಣ ಪಡೆಯಲು ಕೆನರಾ ಬ್ಯಾಂಕ್ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸುತ್ತಿದೆ.
ಆಸಕ್ತರು ಬ್ಯಾಂಕ್ ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.
ಟ್ರಸ್ಟಿ ಅಬ್ದುಲ್ ರೆಹಮಾನ್ ಮಾತನಾಡಿ “ಬಾಲ್ಯದಲ್ಲಿ ತಂದೆ ಹಾಕಿಕೊಟ್ಟ ದಾರಿಯಲ್ಲಿ ಸಂಸ್ಥೆ ಮುಂದುವರೆಯುತ್ತಿದೆ. ಜೀವನದಲ್ಲಿ ಪ್ರತಿಭೆ ಮುಖ್ಯ. ಸಾಹಿತ್ಯ, ಕೃಷಿ, ಸಾಂಸ್ಕೃತಿಕ ಚಿಂತನೆಗಳ ಜೊತೆಗೆ ಓದು ಮಾನಸಿಕ ಮತ್ತು ದೈಹಿಕ ಚಿಂತನೆ ಬೆಳೆಸುತ್ತದೆ. ಆರೋಗ್ಯ ಎಲ್ಲಾ ನೆಮ್ಮದಿಗಳಿಗಿಂತ ದೊಡ್ಡ ಸಂಪಾದನೆ” ಎಂದು ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್
ಪ್ರಬಂಧಕ ಸೌರವ್ ಕುಮಾರ್, ಶಿಕ್ಷಕ ಎನ್.ಜಿ.ಸ್ವಾಮಿ. ಟ್ರಸ್ಟಿಗಳಾದ ಇಬ್ರಾಹಿಂ ಷರೀಫ್, ಅಬ್ದುಲ್
ಕಲಾಂ ಆಜಾದ್, ಕಬೀರ್, ಮಂಜುನಾಥ ಮಲ್ಯ ಇದ್ದರು.


.jpeg)
