ವಾಹನ ಸವಾರ ಗಂಭೀರ
ತೀರ್ಥಹಳ್ಳಿ ತಾಲ್ಲೂಕಿನ
ಬಿಳುಕೊಪ್ಪ ಸಮೀಪ ವ್ಯಾಗನಾರ್ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟಿ ಸವಾರ
ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
ಬಿಳುಕೊಪ್ಪ ಶಾಲೆಯ ಸಮೀಪ ವ್ಯಾಗನಾರ್ ಕಾರಿನ ಮುಂಭಾಗಕ್ಕೆ ಸ್ಕೂಟಿ ಬಡಿದಿದ್ದು ಸ್ಕೂಟಿ ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಸವಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.


.jpeg)