ಮಲ್ನಾಡೋತ್ಸವ ಮೇ
10, 11 ಮತ್ತು 12ಕ್ಕೆ
ತೀರ್ಥಹಳ್ಳಿಯ ಯುವಕ,
ಯುವತಿಯರಿಗಾಗಿ ಬೃಹತ್ ಉದ್ಯೋಗ ಮೇಳ
ಮೂರು ದಿನಗಳ ಪರ್ಯಂತ
ಮ್ಯೂಸಿಕಲ್ ನೈಟ್ಸ್, ಡ್ಯಾನ್ಸ್ ಎಕ್ಸ್‌ಪ್ರೆಸ್, ಕಾಮಿಡಿ ಶೋ
ರಾಜ್ಯದ ಕ್ರಿಯಾಶೀಲ
ಮಾದ್ಯಮ ಸಂಸ್ಥೆಯಾದ ನಮ್ಮೂರ್ ಎಕ್ಸ್‌ಪ್ರೆಸ್ ಆರಂಭಗೊಂಡು ಇದೀಗ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ವಿವಿಧ ರೀತಿಯ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೃಷಿ
ಸಮ್ಮೇಳನ, ಉದ್ಯೋಗ ಮೇಳ, ಆರೋಗ್ಯ ಮೇಳ, ಕಲಾ ಪ್ರದರ್ಶನ, ಮ್ಯೂಸಿಕ್ ನೈಟ್ಸ್, ಡ್ಯಾನ್ಸ್ ಎಕ್ಸ್‌ಪ್ರೆಸ್,
ಕಾಮಿಡಿ ಶೋ ಒಳಗೊಂಡ ಮೂರು ದಿನಗಳ ಮಲ್ನಾಡೋತ್ಸವ ಸೊಪ್ಪುಗುಡ್ಡೆಯ ಸಂಸ್ಕೃತಿ ಮಂದಿರದ ಆವರಣದಲ್ಲಿ
ಮೇ 10, 11, 12 ರಂದು ನಡೆಯಲಿದೆ ಎಂದು ನಮ್ಮೂರು ಎಕ್ಸ್ ಪ್ರೆಸ್ ಮಾದ್ಯಮ ಸಂಸ್ಥೆಯ ಮ್ಯಾನೇಜಿಂಗ್
ಡೈರೆಕ್ಟರ್ ತ.ರಾ.ರಾಘವೇಂದ್ರ ತಿಳಿಸಿದರು.
ಉದ್ಯೋಗ ಮೇಳದಲ್ಲಿ
ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ 80ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದಾರೆ. ಈಗಾಗಲೇ
1200ಕ್ಕೂ ಹೆಚ್ಚು ಯುವಕ, ಯುವತಿಯರು ನೊಂದಾಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಹೊಸದಾಗಿ ಉದ್ಯೋಗ ಅರಸುವವರಿಗೆ
ಉತ್ತಮ ಮಾರ್ಗದರ್ಶನ, ಸಂದರ್ಶನದ ಕೌಶಲ್ಯ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಉದ್ಯೋಗ ಹುಡುಕುವ ಮಲೆನಾಡಿಗರಿಗೆ
ಇದೊಂದು ಸುವರ್ಣಾವಕಾಶವಾಗಿದೆ. ಉದ್ಯೋಗ ಮೇಳ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು
ಹೇಳಿದರು.
ಕೃಷಿ ಸಮ್ಮೇಳನದಲ್ಲಿ
ಕೃಷಿ ಯಂತ್ರೋಪಕರಣ, ಕೃಷಿ ಪದಾರ್ಥ ಮಾರಾಟ, ಸಂವಾದ, ಸಾಧಕರಿಗೆ ಗೌರವ, ಆಹಾರ ಸ್ಟಾಲ್, ವಿಶೇಷ ಖಾದ್ಯ,
ಕಾರು, ಬೈಕ್, ಟ್ರ್ಯಾಕ್ಟರ್, ಆಟೋ ಮಾಹಿತಿ, ವಿಶೇಷ ಮೀನು ಪ್ರದರ್ಶನ, ಆಟಿಕೆ, ಬಟ್ಟೆ, ಪ್ಯಾಷನ್
ವಸ್ತುಗಳ ಪ್ರದರ್ಶನ, ಗುಡಿ ಕೈಗಾರಿಕೆ, ಚಿತ್ರಕಲೆ, ವ್ಯಂಗ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ
ಸುಮಾರು 250ಕ್ಕೂ ಹೆಚ್ಚು ಸ್ಟಾಲ್‌ಗಳು ಸಂಸ್ಕೃತಿ ಮಂದಿರದ ಆವರಣದಲ್ಲಿ ನಡೆಯಲಿದೆ. ಎಲ್ಲರಿಗೂ ಮುಕ್ತ
ಅವಕಾಶ ಕಲ್ಪಿಸಲಾಗಿದೆ. ವೇದಿಕೆ ಕಾರ್ಯಕ್ರಮಗಳು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ
ಎಂದು ತಿಳಿಸಿದರು.
ಮೇ 10ರ ಸಂಜೆ ಗಾಯಕಿ
ಸಾದ್ವಿನಿ ಕೊಪ್ಪ ಮತ್ತು ದಿಯಾ ಹೆಗ್ಡೆ ಹಾಡಿನ ಜೋಡಿಯೊಂದಿಗೆ ಮ್ಯೂನಿಕ್ ನೈಟ್ಸ್, 11ರಂದು ಅರೆಹೊಳೆ
ಪ್ರತಿಷ್ಠಾನ ಹಾಗೂ ಮಂಗಳೂರಿನ ನಂದಗೋಕುಲ ತಂಡ ಇವರಿಂದ ಮಾರಣಕಟ್ಟೆ ಮಹಾತ್ಮೆ ಬಿಂಬಿಸುವ ಬಿಡುವನೇ
ಬ್ರಹ್ಮಲಿಂಗ ನೃತ್ಯ ರೂಪಕ ನಡೆಯಲಿದೆ. 12 ರಂದು ಕುಂದಾಪುರ ಕುಳ್ಳಪ್ಪು ತಂಡದಿಂದ ಗಿರಾಕಿಯೇ ಇಲ್ಲ
ಮರಾಯ ಹಾಸ್ಯ ನಾಟಕ ನಡೆಯಲಿದೆ. ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸುವಂತೆ ಕೋರಿದ್ದಾರೆ.
ಅಚ್ಚೂರು ರಂಜನ್, ಸಂದೀಪ್ ಎ.ಪಿ., ಸಂದೀಪ್ ಕೆ.ಎಸ್. ಮತ್ತಿತರರು ಇದ್ದರು.


.jpeg)