ಅಂತಃಕರಣನ ತಂಡಕ್ಕೆ ಪ್ರಥಮ ಸ್ಥಾನ
ಸಾಫ್ಟ್ ವೇರ್ ಉದ್ಯಮಜಗತ್ತಿನ ದೈತ್ಯಕಂಪನಿಗಳಲ್ಲೊಂದಾದ ಅಮೇರಿಕದ ಸಿಸ್ಕೊ ಕಂಪನಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆಗೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸಂಬಂಧಿಸಿದ ರಾಷ್ಟ್ರಮಟ್ಟದ ‘ಸಿಸ್ಕೊ ಫೋರ್ಕಾಸ್ಟ್ ಲೀಗ್ ಇಂಡಿಯಾ ಸ್ಪರ್ಧೆ’ಯಲ್ಲಿ ವಿದ್ಯಾರ್ಥಿ ಅಂತಃಕರಣನ ತಂಡ ಪ್ರಥಮ ಸ್ಥಾನ ಗಳಿಸಿದೆ. ಅಂತಃಕರಣನ ತಂಡದಲ್ಲಿ ವಿದ್ಯಾರ್ಥಿಗಳಾದ ಆರ್ಯನ್ ಎಂ ಮತ್ತು ಸ್ಮಿತಾ ಇದ್ದರು.
ಮೊದಲ ಸುತ್ತಿನಲ್ಲಿ ಒಟ್ಟು ಮೂರು ಮಂದಿ ವಿದ್ಯಾರ್ಥಿಗಳಿರುವ 450 ತಂಡಗಳು ಭಾಗವಹಿಸಿದ್ದು ಇವುಗಳಲ್ಲಿ ಅಂತಿಮ ಸ್ಪರ್ಧೆಗೆ ಆರು ತಂಡಗಳು ಆಯ್ಕೆಯಾದವು. ತುರುಸಿನ ಅಂತಿಮ ಸ್ಪರ್ಧೆಯಲ್ಲಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಅಂತಃಕರಣನ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಬೆಂಗಳೂರಿನ ಬಿ.ಎಂ.ಎಸ್ ಕಾಲೇಜು ಮತ್ತು ಆರ್.ವಿ ಕಾಲೇಜಿನ ವಿದ್ಯಾರ್ಥಿಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.
ಬಹುಮಾನವಾಗಿ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗು ಒಟ್ಟು ಅಂದಾಜು ಒಂದು ಲಕ್ಷ ಮೌಲ್ಯದ ಕಂಪ್ಯೂಟರ್ ಗೆ ಸಂಬಂಧಿಸಿದ ಉತ್ಪನ್ನಗಳನ್ನು ನೀಡಲಾಯಿತು. ಪ್ರಶಸ್ತಿ ವಿಜೇತ ಅಂತಃಕರಣ ತೀರ್ಥಹಳ್ಳಿಯ ಹರಳಿಮಠ ಮೂಲದವವರಾಗಿದ್ದು ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ..jpeg)

