ಅಂಕ ಕಡಿಮೆ ಬಂದಿದ್ದರಿಂದ
ನೊಂದ ಬಾಲಕಿ
ಬಸವಾನಿಯ ಹೊಳೆಕೊಪ್ಪದಲ್ಲಿ
ಘಟನೆ
ವಿಜ್ಞಾನ ವಿಷಯದಲ್ಲಿ
ಎರಡು ಅಂಕಿ ಕಡಿಮೆ ಬಂದಿದ್ದರಿಂದ 7ನೇ ತರಗತಿ ವಿದ್ಯಾರ್ಥಿನಿ ಇಂಚನ ಎಚ್.ಆರ್. (13) ನೇಣು ಬಿಗಿದುಕೊಂಡು
ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಹೊಳೆಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಇಂಚನ ಬಸವಾನಿ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮವಾಗಿಯೇ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ಎಲ್ಲಾ ವಿದ್ಯಾರ್ಥಿಗಳಿಗೂ ಸಮುದಾಯದತ್ತ
ಕಾರ್ಯಕ್ರಮದ ಹಿನ್ನಲೆಯಲ್ಲಿ ಅಂಕಪಟ್ಟಿ ವಿತರಿಸಿದ್ದರು. ಪೋಷಕರೊಂದಿಗೆ ಬಾಲಕಿ ಕೂಡ ಅಂಕಪಟ್ಟಿ ಪಡೆದಿದ್ದು
ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿದೆ ಎಂದು ನೊಂದುಕೊಂಡಿದ್ದಳು.
ಪೋಷಕರು ವಿದ್ಯಾರ್ಥಿನಿಯನ್ನು
ಹೊಳೆಕೊಪ್ಪದ ಮನೆಯಲ್ಲಿ ಬಿಟ್ಟು ತೀರ್ಥಹಳ್ಳಿಗೆ ತೆರಳಿದ್ದರು. ಮನೆಯಲ್ಲೇ ಇದ್ದ ವಿಕಲಚೇತನ ಸೋದರಿ
ಪೋಷಕರಿಗೆ ಫೋನ್ ಮೂಲಕ ವಿಷಯ ತಿಳಿಸಿ ತಕ್ಷಣಕ್ಕೆ ಬರುವಂತೆ ಹೇಳಿದ್ದಾಳೆ. ಪೋಷಕರು ಬಂದು ವಿದ್ಯಾರ್ಥಿನಿಯ
ನೇಣು ಬಿಚ್ಚಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಮಾರ್ಗ ಮಧ್ಯೆಯೇ ಬಾಲಕಿ ಅಸುನೀಗಿದ್ದಾಳೆ.
ಬಾಲಕಿ ಹೊಳೆಕೊಪ್ಪ
ಗ್ರಾಮದ ರಾಘವೇಂದ್ರ ಮತ್ತು ಮಾಲಿನಿ ದಂಪತಿಗಳ ಪುತ್ರಿ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
