ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುನ್ನೂರು ಜಗನ್ನಾಥ ಪೂಜಾರಿ ನಿನ್ನೆ ರಾತ್ರಿ ಕಷ್ಟ
ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು.
ಅವರಿಗೆ 67 ವರ್ಷ ವಯಸಾಗಿತ್ತು.
ಕಾಲೇಜು ದಿನಗಳಲ್ಲಿ ಅವರು ಮೈಸೂರು ಯೂನಿವರ್ಸಿಟಿ ಮಟ್ಟದ ಕಬಡ್ಡಿ ಆಟಗಾರನಾಗಿ ಹೆಸರು ಮಾಡಿದ್ದರು. ತೀರ್ಥಹಳ್ಳಿಯ ಪ್ರಸಿದ್ದ ಯುವಕ ಸಂಘಗಳಲ್ಲಿ ಒಂದಾಗಿದ್ದ ಶ್ರೀ ಗಜಾನನ ಯುವಕ ಸಂಘ ಹುಣಸವಳ್ಳಿಯನ್ನು 80 ದಶಕದಲ್ಲಿ ಸ್ಥಾಪಿಸಿ ಅದನ್ನು ಪ್ರಮುಖವಾಗಿ ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಈ ಸಂಘದ ಮೂಲಕ ಅವರು ಭೂತದ ಕೋಲ ಜಾನಪದ ಕಲೆಯನ್ನು ತೀರ್ಥಹಳ್ಳಿಯಲ್ಲಿ ಮೊದಲ ಸಲ ರಂಗದ ಮೇಲೆ ಪ್ರಯೋಗಿಸಿದ್ದರು. ಉತ್ತಮ ಆಡಳಿತಗಾರನಾಗಿದ್ದ ಅವರು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದಾಗ ನಿರ್ಮಲ ಗ್ರಾಮ ರಾಷ್ಟೀಯ ಪುರಸ್ಕಾರಕ್ಕೆ ಗ್ರಾಮ ಪಂಚಾಯತ್ ಪಾತ್ರವಾಗಿತ್ತು. ಸಹಕಾರಿಯಾಗಿ ಕೂಡ ಅವರು ಗುರುತಿಸಿಕೊಂಡಿದ್ದರು. ಮೂರು ಬಾರಿ ಅವರು ಕಸಬಾ ಸೊಸೈಟಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದರು.
ಅವರು ಮಗಳು, ಮೊಮ್ಮಕ್ಕಳು, ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.