ಆರಗ, ಕಿಮ್ಮನೆ, ಆರ್‌ಎಂಎಂಗೆ ಸನ್ಮಾನ
ತೀರ್ಥಹಳ್ಳಿಯ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ, ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 27ರ ಗುರುವಾರ ರಾತ್ರಿ 7 ಗಂಟೆಗೆ ಸೊಪ್ಪುಗುಡ್ಡೆ ಸಂಸ್ಕತಿ ಮಂದಿರದ ಆವರಣದಲ್ಲಿ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಹೊದಲ ಶಿವು, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ವಿಶಾಲ್ ಕುಮಾರ್ ಹೇಳಿದರು.
ಆದಿ ಧೂಮಾವತಿ, ದೇಯಿ
ಬೈದತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಗೆಜ್ಜೆಗಿರಿ ಮೇಳದವರಿಂದ ಪುಣ್ಯ ಕಥಾಭಾಗ ಪ್ರದರ್ಶನಗೊಳ್ಳಲಿದೆ.
ಈ ಸಂದರ್ಭ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಲೆನಾಡು ಅಭಿವೃದ್ಧಿ
ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರನ್ನು ಅಭಿನಂದಿಸಲಾಗುವುದು ಎಂದರು.
ಪ್ರಮುಖರಾದ ಕುಪ್ಪಳ್ಳಿ ಸುಧಾಕರ್, ಶ್ರೀಧರ್ ಮಕ್ಕಿಕೊಪ್ಪ, ಶಾಲಿನಿ ನಾಗರಾಜ್,
ಸೂರ್ಯನಾರಾಯಣ ಚಿಡುವ, ಗೀತಾ ರಾಘವೇಂದ್ರ, ಶ್ವೇತಾ ಶಬರೀಶ್, ಮಂಜುಳಾ ನಾಗೇಂದ್ರ, ಪ್ರಮೋದ್ ಪೂಜಾರಿ,
ಮಂಡಗದ್ದೆ ಪ್ರವೀಣ್ ಇದ್ದರು.
