ಶಾಸಕ ಆರಗ ಜ್ಞಾನೇಂದ್ರರಿಂದ ಕ್ಷುಲ್ಲಕ ರಾಜಕಾರಣ

ಆರಗ ಅವಧಿಯಲ್ಲೇ ಖಬರಸ್ತಾನ, ವಕ್ಫ್‌ ಬೋರ್ಡಿಗೆ ಹೆಚ್ಚು ಮಂಜೂರಾತಿ
ಜೀನತ್‌ ಗೌಸ್, ರಹಮತ್‌ ಉಲ್ಲಾ ಅಸಾದಿ ಅವರನ್ನು ಅಧ್ಯಕ್ಷರನ್ನಾಗಿಸುವಾಗ ತತ್ವ ಸಿದ್ಧಾಂತದ ನೆನಪಿರಲಿಲ್ಲವೇ –ತುಪ್ಪದಮನೆ ವಿನಾಯಕ

ಶಾಸಕ ಆರಗ ಜ್ಞಾನೇಂದ್ರರ ರಾಜಕೀಯ ಕಾರಣಗಳಿಗಾಗಿ ಹಿಂದೂ ಮುಸ್ಲೀಮರ ನಡುವೆ ಕಂದಕ ಉಂಟುಮಾಡುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಅನೇಕ ಬಾರಿ ಮುಸ್ಲೀಮರ ಪರವಾಗಿ ನಿಂತಿರುವ ಅವರು ಈಗ ವಕ್ಫ ವಿಚಾರದಲ್ಲಿ ಇಡೀ ಮುಸ್ಲಿಂ ಜನಾಂಗವನ್ನು ತಪ್ಪಿತಸ್ಥರು ಎನ್ನುವಂತೆ ನೋಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ತುಪ್ಪದಮನೆ ವಿನಾಯಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಸ್ತವವಾಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹಾಗೂ ಆರಗ ಜ್ಞಾನೇಂದ್ರ ಗೃಹಮಂತ್ರಿಯಾಗಿದ್ದಾಗಲೇ ವಕ್ಫ ಮಂಡಳಿಯಲ್ಲಿ ಅತಿ ಹೆಚ್ಚಿನ ಅನುದಾನ ನೀಡಲಾಗಿದೆ ಅಲ್ಲದೇ ಸಂಬಂಧಿಸಿದ ಆಸ್ತಿಯನ್ನು ಕೂಡ ವಶಪಡಿಸಿಕೊಳ್ಳಲು ಸೂಚನೆಯನ್ನು ನೀಡಲಾಗಿದ್ದು ಇದೀಗ ಬಹಿರಂಗಗೊಂಡಿದೆ. ಜ್ಞಾನೇಂದ್ರರವರೇ ಶಾಸಕರಾಗಿದ್ದ ಅವಧಿಯಲ್ಲಿ ಮುಸ್ಲಿಂ ಸಮುದಾಯದ ಖಬರಸ್ತಾನ ಮತ್ತು ವಕ್ಫ್‌ ಬೋರ್ಡಿಗೆ ಅಗ್ರಹಾರ ಹೋಬಳಿಯ ಅಗಳಬಾಗಿಲಿನಲ್ಲಿ 4 ಎಕರೆ, ಆಗುಂಬೆ ಹೋಬಳಿಯ ಹೊಸೂರಿನಲ್ಲಿ 1 ಎಕರೆ, ಮಂಡಗದ್ದೆ ಹೋಬಳಿಯ ಕಣಗಲಕೊಪ್ಪದಲ್ಲಿ 2 ಎಕರೆ, ಮಂಡಗದ್ದೆ ಹೋಬಳಿಯ ತೂದೂರಿನಲ್ಲಿ 2 ಎಕರೆ ಮಂಜೂರಾಗಿದೆ. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್‌ ರೈತರು ಆಸ್ತಿಗಳನ್ನು ವಕ್ಫ ಬೋರ್ಡಿನ ವಶಕ್ಕೆ ನೀಡಲು ಹೊರಟಿದೆ ಎನ್ನಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೇ ಅಧಿಕಾರ ಹಿಡಿಯಬೇಕು ಎಂಬ ಒಂದೇ ಕಾರಣಕ್ಕಾಗಿ ಈ ಹಿಂದೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಒಮ್ಮೆ ಜೀನತ್‌ ಗೌಸ್‌ ಹಾಗೂ ಇನ್ನೊಮ್ಮೆ ರಹಮತ್‌ ಉಲ್ಲಾ ಅಸಾದಿಯನ್ನು ಬಿಜೆಪಿಯಿಂದ ಅಧ್ಯಕ್ಷರಾಗಿ ಮಾಡುವಾಗ ಬಿಜೆಪಿ ಅಪ್ಪಟ ಹಿಂದುಗಳ ಪಕ್ಷ ಎನ್ನುವುದು ಜ್ಞಾನೇಂದ್ರ ಅವರಿಗೆ ನೆನಪಿರಲಿಲ್ಲವೇ ಎಂದು ಪ್ರಶ್ನಿಸಿರುವ ವಿನಾಯಕ್‌ ಆರಗ ಜ್ಞಾನೇಂದ್ರರ ಈ ಮುಖವಾಡ ರಾಜಕಾರಣದ ವಿರುದ್ಧ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ತಾಲ್ಲೂಕು ಕಚೇರಿ ಎದುರು ಸತ್ಯಾಗ್ರಹ ಹೂಡುವುದಾಗಿ ಎಚ್ಚರಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post