ಸಂಬಾ ನಾಗೇಂದ್ರ ಅವರಿಗೆ ಮಾತೃ ವಿಯೋಗ
ಪುತ್ರರಾದ ನಾಗರಾಜ್ ಪ್ರಗತಿಪರ ಕೃಷಿಕರು, ಸಂಬಾ ನಾಗೇಂದ್ರ ಪ್ರಗತಿಪರ ಚಿಂತಕರಾಗಿದ್ದು ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಮತ್ತೋರ್ವ ಸಹೋದರ ನರೇಂದ್ರ ಎಸ್.ಬಿ. ಅವರು ಕೆಎಎಸ್ ಅಧಿಕಾರಿಯಾಗಿದ್ದು ಸಚಿವ ಎಂ.ಬಿ.ಪಾಟೀಲ್ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುತ್ರಿ ಲೀಲಾವತಿ ಬೆಂಗಳೂರಿನಲ್ಲಿ ನೆಲೆಸಿದ್ದು ಅವರ ಇಬ್ಬರು ಗಂಡು ಮಕ್ಕಳನ್ನು ಲಕ್ಷ್ಮಮ್ಮ ಅಕ್ಕರೆಯಿಂದ ಆರೈಕೆ ಮಾಡಿದ್ದಾರೆ. ಇವರ ಗರಡಿಯಲ್ಲಿ ಬೆಳೆದ ಮೊಮ್ಮಕ್ಕಳಾದ ಮಧುಕರ ಎನ್. ಡಿಆರ್‌ಡಿಓ ದಲ್ಲಿ ವಿಜ್ಞಾನಿಯಾಗಿದ್ದಾರೆ. ಮನೋಹರ ಎನ್. ಹಾಸನ ಮಹಿಳಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಂತ್ಯಕ್ರಿಯೆ ಗುರುವಾರ ಸಂತೇಹಕ್ಕಲು ಗ್ರಾಮದಲ್ಲಿ ನಡೆಯಿತು.
