ಮನೆ ಬಾಗಿಲಿಗೆ ಬರಲಿದೆ ಅಡಿಕೆ ಸುಲಿಯುವ ಯಂತ್ರ

ಬೆಳೆಗಾರರ ಶ್ರಮ ಕಡಿಮೆ ಮಾಡಿದ ಹಿಂದೂಸ್ತಾನ ಅಡಿಕೆ ಸುಲಿಯುವ ಯೂನಿಟ್
ವಿಶ್ವಾಸಾರ್ಹ ಸೇವೆ - ಸ್ಪರ್ಧಾತ್ಮಕ ದರ
ಎಲ್ಲಾ ರೀತಿಯ ಅಡಿಕೆ ಬೆಳೆಗಾರರಿಗೂ ಅಡಚಣೆ ಇಲ್ಲದ ಸೇವೆ

ಮಲೆನಾಡಿನ ಪ್ರಮುಖ ಜೀವನಾಧಾರ ಬೆಳೆಯಾದ ಅಡಿಕೆ ಕೊಯ್ಲು ಇನ್ನೇನು ಆರಂಭಗೊಳ್ಳಲಿದೆ. ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿರುವ ಅಡಿಕೆ ತೋಟಗಳು ಈಗ ದೊಡ್ಡ ಪ್ರಮಾಣ ಕಾರ್ಮಿಕ ಕೊರತೆ ಅನುಭವಿಸುತ್ತಿದೆ. ಮೊದಲಿನಂತೆ ಹತ್ತಾರು ಜನ ಸೇರಿ ಒಂದೆಡೆ ಕುಳಿತು ಅಡಿಕೆ ಸುಲಿಯುವ ಸನ್ನಿವೇಶ ಈಗ ಮಾಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಅಡಿಕೆ ಉತ್ಪಾದನೆಯಾದಾಗ ಅಡಿಕೆ ಬೆಳೆಗಾರ ಎದುರಿಸಿದ ಪ್ರಮುಖ ಸವಾಲು ಅದನ್ನು ಸುಲಿಸುವುದು ಹೇಗೆಂಬುದು.

ಆ ಸಮಸ್ಯೆಗೆ ಹರಳೀಮಠದ ಹಿಂದೂಸ್ತಾನ ಅಡಿಕೆ ಸುಲಿಯುವ ಯೂನಿಟ್ ಆಪತ್ಬಾಂದವನಾಗಿ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸುತ್ತಿದೆ. ಅತೀ ಕಡಿಮೆ ವೆಚ್ಚದಲ್ಲಿ ಅಡಿಕೆ ಸುಲಿಯುವುದು ಮತ್ತು ಹೇಳಿದ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವುದು ಈ ಯೂನಿಟ್‌ನ ವಿಶೇಷವಾಗಿದೆ. ಅಲ್ಲದೇ ಅಡಿಕೆ ಸುಲಿಯುವ ಯಂತ್ರದ ಸಾಗಾಣಿಕೆ ವೆಚ್ಚವನ್ನು ಸಹ ಪಡೆಯುವುದಿಲ್ಲ. ಹಣ್ಣು ಅಡಿಕೆ ಕೂಡ ಸುಲಿದುಕೊಡುವ ವಿಶೇಷ ಸೇವೆಯೂ ಲಭ್ಯವಿದೆ. ಅತಿ ಸಣ್ಣ ರೈತರಿಂದ ಹಿಡಿದು ಸಾವಿರಾರು ಕ್ವಿಂಟಾಲ್‌ ಅಡಿಕೆ ಬೆಳೆಗಾರರ ಅಡಿಕೆ ಸುಲಿತದ ಕೆಲವನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ವಿಶೇಷವಾಗಿ ಅನ್ಯ ಉದ್ಯೋಗಗಳ ನಿಮಿತ್ತ ದೂರದ ಊರುಗಳಲ್ಲಿದ್ದು ಅಡಿಕೆ ತೋಟವನ್ನು ನಿರ್ವಹಿಸುತ್ತಿರುವವರಿಗೆ ಈ ಯೂನಿಟ್‌ ವರದಾನವಾಗಿದೆ.

ಅತ್ಯಾಧುನಿಕ 16 ಬೆಲ್ಟ್‌ ಅಡಿಕೆ ಸುಲಿಯುವ ಯಂತ್ರದೊಂದಿಗೆ ಅಡಿಕೆ ಸುಲಿತದ ಕಾರ್ಯವನ್ನು ಮಾಡಿಕೊಡಲಾಗುತ್ತಿದ್ದು, ವಿದ್ಯುತ್‌ ಅವಶ್ಯಕತೆ ಕೂಡ ಇರುವುದಿಲ್ಲ. ಈಗಾಗಲೇ ಹಿಂದೂಸ್ತಾನ ಅಡಿಕೆ ಸುಲಿಯುವ ಯೂನಿಟ್‌ ತನ್ನ ದಕ್ಷ ಸೇವೆಗಾಗಿ ಅಡಿಕೆ ಬೆಳೆಗಾರರ ಮೆಚ್ಚುಗೆ ಗಳಿಸಿದ್ದು ಈಗಾಗಲೇ ಅಡಿಕೆ ಬೆಳೆಗಾರರಿಂದ ಮುಂಗಡ ಬುಕ್ಕಿಂಗ್‌ ಆರಂಭಗೊಂಡಿದೆ. ತಮ್ಮ ಅವಶ್ಯಕತೆಗಾಗಿ ಅಡಿಕೆ ಬೆಳೆಗಾರರು ಕೆಳಕಂಡ ಮೊಬೈಲ್‌ ನಂಬರ್‌ ಸಂಪರ್ಕಿಸಬಹುದಾಗಿದೆ - 9448241790, 9901245533, 9980005818

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post