ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ
ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರವರೆಗೆ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.ಪ್ರತಿ ದಿನ “ಸಪ್ತಶತೀ ಪಾರಾಯಣ”, ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ರುದ್ರಾಭೀಷೇಕ, ಮಹಾಮಂಗಳಾರತಿ ಮೊದಲಾದ ಉಪಚಾರಗಳಿಂದ ರಾಮೇಶ್ವರ ಸಾನ್ನಿಧ್ಯದಲ್ಲಿ ದೇವತಾ ಕಾರ್ಯ ನಡೆಯಲಿದೆ.
ಅಕ್ಟೋಬರ್ 12 ನೇ ಶನಿವಾರ ಬೆಳಿಗ್ಗೆ ವಿಜಯದಶಮಿಯಂದು “ದುರ್ಗಾಹೋಮ” ಸಂಪನ್ನಗೊಳ್ಳಲಿದೆ. ಭಗವದ್ಭಕ್ತರು ಈ ವಿಶೇಷ ದೇವ್ಯತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪುರೋಹಿತರು ತಿಳಿಸಿದ್ದಾರೆ.
ವಿ.ಸೂ:ಸಪ್ತಶತೀ ಪಾರಾಯಣ, ದುರ್ಗಾಹೋಮ ಸೇವೆ ಮಾಡಿಸಲು ಇಚ್ಚಿಸುವ ಭಕ್ತಾಧಿಗಳು ಮುಂಚಿತವಾಗಿ ದೇವಸ್ಥಾನದ ಅರ್ಚಕರಲ್ಲಿ ಹೆಸರು, ರಾಶಿ, ನಕ್ಷತ್ರ ನೋಂದಾಯಿಸಲು ಕೋರಿದೆ.