ಪುಟ್ಟ ಸಮುದಾಯದ ದಿಟ್ಟ ಸಾಧನೆ
ಸ್ಮರಣೀಯ ನೆರವು ನೀಡಿದ ಉದ್ಯಮಿ ನಟರಾಜ್ ಕಾಮತ್
ಕಟ್ಟಡ ಉಸ್ತುವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸುರಭಿ ಅಶೋಕ್
ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಲ್ಲಿ ಆರ್.ಎಸ್.ಬಿ. ಸಮುದಾಯ ರಂಜದಕಟ್ಟೆ ವಿಶ್ವೇಶ್ವರ ಕಾಮತ್ ಸ್ಮರಣಾರ್ಥ ನಿರ್ಮಿಸಿರುವ ಆರ್.ಎಸ್.ಬಿ. ಸಬಾಭವನ ಉದ್ಘಾಟನೆಗೆ ಸಜ್ಜಾಗಿದೆ.
ತೀರ್ಥಹಳ್ಳಿಯ ಇತರೆ ಸಮುದಾಯಭವನಗಳಿಗೆ ಹೋಲಿಸಿದರೆ ಅತ್ಯಂತ ವಿಶಾಲ ಹಾಗೂ ಆಧುನಿಕ ಸೌಲಭ್ಯ ಹೊಂದಿರುವ ಸಮುದಾಯ ಭವನ ಎಂಬ ಖ್ಯಾತಿ ಇದಕ್ಕೆ ದೊರಕಲಿದೆ ಅಲ್ಲದೆ ಈ ಸಮುದಾಯ ಭವನದ ಗಾತ್ರಕ್ಕೆ ತಕ್ಕ ಹಾಗೆ ವಿಶಾಲವಾದ ಪಾರ್ಕಿಂಗ್ ಆವರಣ ಕೂಡ ದೊರಕಲಿರುವುದರಿಂದ ಮುಂದೆ ಸಮುದಾಯ ಭವನ ಜನಪ್ರಿಯಗೊಳ್ಳುವ ನಿರೀಕ್ಷೆ ಇದೆ.
ಪುಟ್ಟ ಸಮುದಾಯದ ದಿಟ್ಟ ಸಾಧನೆ..
ಆರ್.ಎಸ್.ಬಿ. ಅಥವಾ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜ ತೀರ್ಥಹಳ್ಳಿಯ ಅತ್ಯಂತ ಚಿಕ್ಕ ಜನ ಸಂಖ್ಯೆ ಹೊಂದಿರುವ ಸಮಾಜ. ಹೆಚ್ಚೆಂದರೆ 1400 ಜನರಿರಬಹುದು ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದ ಶ್ರಮಜೀವಿ ಕೃಷಿಕರು.
ಇವರೆಲ್ಲ ಒಂದುಗೂಡಿ ಇಂತಹ ಒಂದು ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬ ಕನಸಿಗೆ ಮುಂದಡಿ ಇಟ್ಟಿದ್ದು ದಿವಂಗತ ರಾಮಚಂದ್ರ ಬೋರ್ಕರ್ ಮುಂದಾಳತ್ವದಲ್ಲಿ ಪ್ರಸ್ತುತ ಅವರ ಪತ್ನಿ ಸುಮಾ ರಾಮಚಂದ್ರ ಅಧ್ಯಕ್ಷರು ಹಾಗೂ ಇದಕ್ಕೆ ಬೇಕಾದ ಎಲ್ಲ ರೀತಿಯ ಬೆಂಬಲ ಹಾಗೂ ನೈತಿಕ ಬಲ ತುಂಬಿದ್ದು ಖ್ಯಾತ ಉದ್ಯಮಿ ರಂಜದಕಟ್ಟೆ ನಟರಾಜ್ ಕಾಮತ್ ಹಾಗೂ ಎಲ್ಲರ ನಡುವೆ ಸಮನ್ವಯ ಸಾಧಿಸಿ ಅಪಾರ ಶೃದ್ದೆಯಿಂದ ಸಮಾಜದ ದಾನಿಗಳ ಬಳಿ ಸಾಗಿ ಅವರ ಮನವೊಲಿಸಿದ್ದು ಯುವ ಉದ್ಯಮಿ ಸುರಭಿ ಅಶೋಕ್.
ಕನಸಿನಂತೆ ನಿರ್ಮಾಣಗೊಂಡಿರುವ ಸಭಾಂಗಣಕ್ಕೆ ಯಾವ ಹಂತದಲ್ಲೂ ಯಾವುದೇ ರೀತಿಯ ವಿಳಂಬ ಆಗದಂತೆ ನಿರ್ಮಾಣ ಕಾರ್ಯ ಮುಂದುವರಿಯಲು ಅಶೋಕ್ ಅವರ ಪರಿಶ್ರಮ ದೊಡ್ಡದು ಎನ್ನುತ್ತಾರೆ ಅಭಿಮಾನದಿಂದ ಆರ್ ಎಸ್ ಬಿ ಸಮಾಜದ ಪ್ರಮುಖರು.
ಉದ್ಘಾಟನೆ ಕುರಿತಂತೆ ಸಮುದಾಯ ಭವನದಲ್ಲಿ ಅಧ್ಯಕ್ಷರಾದ ಸುಮಾ ರಾಮಚಂದ್ರ ಅಧ್ಯಕ್ಷತೆಯಲ್ಲಿ ಸುದ್ದಿ ಗೋಷ್ಠಿ ಏರ್ಪಡಿಸಿ ಮಾಹಿತಿಗಳನ್ನು ಸಮಿತಿ ಹಂಚಿಕೊಂಡಿತು. ಸಮಿತಿ ಸದಸ್ಯರ ಜೊತೆಗೆ ಸುರಭಿ ಅಶೋಕ್ ಸಮುದಾಯ ಭವನ ನಿರ್ಮಾಣ ಹಾಗೂ ಉದ್ಘಾಟನೆ ಕುರಿತು ಮಾಹಿತಿ ಹಂಚಿಕೊಂಡರು. ಸಮಾಜದ ಪ್ರತಿ ಕುಟುಂಬಗಳು ಕೂಡ ಈ ನಿರ್ಮಾಣ ಕಾರ್ಯದಲ್ಲಿ ತಮ್ಮ ಶಕ್ತಿ ಮೀರಿ ನೆರವು ನೀಡಿದ್ದು ಮತ್ತು ಉದ್ಯಮಿ ರಂಜದಕಟ್ಟೆ ನಟರಾಜ್ ಕಾಮತ್ ಬಹುದೊಡ್ಡ ನೇರವು ನೀಡಿರುವುದನ್ನು ಸಮಿತಿ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿತು.
ಅಲ್ಲದೆ ಸಂಸದ ಬಿ ವೈ ರಾಘವೇಂದ್ರ ತಮ್ಮ ಸಂಸದ ನಿಧಿಯಿಂದ 50ಲಕ್ಷ ರೂಗಳ ಮೊತ್ತ ನೀಡಿದ್ದು ಹಾಗೂ ಪಟ್ಟಣ ಮತ್ತು ಗ್ರಾಮ ಪಂಚಾಯತ್ ಎಲ್ಲ ಸಹಕಾರ ನೀಡಿದ್ದನ್ನು ಕೂಡ ಸಮಿತಿ ಸ್ಮರಿಸಿತು.
ಅಕ್ಟೋಬರ್ 21 ರ ಸೋಮವಾರ ಸಂಜೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು 22ರ ಮಂಗಳವಾರ ಬೆಳಿಗ್ಗೆ 8.20ರಿಂದ ವಿಶ್ವನಾಥ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 23ರ ಬುಧವಾರ ಬೆಳಿಗ್ಗೆ 10.30ಕ್ಕೆ ಗೋವಾ ಕೈವಲ್ಯ ಮಠದ ಶ್ರೀ ಶ್ರೀ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನಾ ಕಾರ್ಯ ಆರಂಭಗೊಳ್ಳಲಿದೆ. ಅಧ್ಯಕ್ಷತೆಯನ್ನು ಸುಮಾ ರಾಮಚಂದ್ರ ವಹಿಸಲಿದ್ದು ಗೌರವ ಉಪಸ್ಥಿತಿ ನಟರಾಜ್ ಕಾಮತ್ ಹಾಗೂ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯುತಿ ಅಧ್ಯಕ್ಷ ಟಿ.ರೆಹಮತ್ ಉಲ್ಲಾ ಅಸಾದಿ, ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ.ವೆಂಕಟೇಶ್, ಉದ್ಯಮಿ ಸದಾನಂದ ನಾಯಕ್ ಪುನಾ, ದಕ್ಷಿಣ ಕನ್ನಡ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಗೀತಾಂಜಲಿ ಟೆಕ್ಸ್‌ಟೈಲ್ಸ್‌ನ ಸಂತೋಷ್ ವಾಗ್ಲೆ, ಪುತ್ತೂರು ಸರಸ್ವತಿ ಸೌಹಾರ್ದ ಸಹಕಾರಿ ಅಧ್ಯಕ್ಷ ಸತೀಶ್ ಚಂದ್ರ ಎಸ್.ಆರ್., ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಶಾಂತರಾಮ ಪ್ರಭು ಉಪಸ್ಥಿತಿ ಇರಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಎಚ್.ಎನ್.ರಾಘವೇಂದ್ರ ಭಾಗವ್, ಹೊದಲ ವಿಶ್ವನಾಥ ಪ್ರಭು, ಎಂ.ಸಿ.ರಾಘವೇಂದ್ರ ನಾಯಕ್, ಎಚ್.ಎನ್.ವಾಸುದೇವ್ ನಾಯಕ್, ಟಿ.ಎಂ.ರಾಘವೇಂದ್ರ, ಸುಧಾ ಸುರೇಶ್, ಕೋಲ್ಗಾರ್ ಅಮರ್, ಕುಟ್ಟಿ ನಾಯಕ್ ಮುಂತಾದವರು ಇದ್ದರು.